
ನವದೆಹಲಿ(ಅ.07): ಕೇಂದ್ರ ಸರ್ಕಾರದ ನಿಯಮಾವಳಿಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಬಂದ್'ಗೆ ಕರೆ ನೀಡಿದೆ.
ದೇಶದ 54 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್'ಗಳು ಅ.12ರ ಮಧ್ಯರಾತ್ರಿಯಿಂದ ಅ.13 ರ ಮಧ್ಯರಾತ್ರಿಯವರೆಗೂ ಬಂದ್'ಗೆ ಕರೆ ನೀಡಿದೆ. ಇದೇ ಮಾರಾಟಗಾರರ ಸಂಘ ಈ ವರ್ಷದ ಜೂನ್ ತಿಂಗಳಲ್ಲಿ ದಿನನಿತ್ಯದ ಬೆಲೆ ಪರಿಷ್ಕರಣೆಯನ್ನು ವಿರೋಧಿಸಿ ಬಂದ್'ಗೆ ಕರೆ ನೀಡಿತ್ತು. ನಂತರ ಕೇಂದ್ರ ಸರ್ಕಾರ ಮಧ್ಯರಾತ್ರಿಯ ಬದಲಾಗಿ ಬೆಳಿಗ್ಗೆ 6 ಗಂಟೆಗೆ ಬದಲಿಸುವುದಾಗಿ ಹೇಳಿದ ನಂತರ ಬಂದ್ ಕೈಬಿಡಲಾಗಿತ್ತು.
ಭಾರತದ ಅತೀ ದೊಡ್ಡ ತೈಲ ಮಾರಾಟ ಸಂಸ್ಥೆಯಾದ ಐಒಸಿ ನಿತ್ಯ ಬೆಲೆ ಪರಿಷ್ಕರಣೆಯ ಮಾಹಿತಿಯನ್ನು ಎಲ್'ಇಡಿ ಪರದೆ, ಟೋಲ್ ನಂಬರ್ ಸಾಮಾಜಿಕ ಮಾಧ್ಯಮಗಳು, ಮೊಬೈಲ್ ಆಪ್ ಮೂಲಕ ನೀಡುವುದಾಗಿ ಈ ಮೊದಲು ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.