ಇತಿಹಾಸ ಪುಟ ಸೇರಿದ 500 ರೂಪಾಯಿ ನೋಟು: ಮಧ್ಯರಾತ್ರಿಯಿಂದಲೇ 500 ನೋಟ್ ಚಲಾವಣೆ ಸ್ಥಗಿತ

Published : Dec 03, 2016, 02:50 AM ISTUpdated : Apr 11, 2018, 12:59 PM IST
ಇತಿಹಾಸ ಪುಟ ಸೇರಿದ 500 ರೂಪಾಯಿ ನೋಟು: ಮಧ್ಯರಾತ್ರಿಯಿಂದಲೇ 500 ನೋಟ್ ಚಲಾವಣೆ ಸ್ಥಗಿತ

ಸಾರಾಂಶ

ಹಾಗೋ ಇಗೋ ನಿಮ್ಮ ಹತ್ತಿರ 500 ರೂಪಾಯಿ ನೋಟ್ ಉಳಿದುಕೊಂಡಿದ್ದರೆ ಅದನ್ನು ಆಸ್ಪತ್ರೆ, ಪೆಟ್ರೋಲ್ ಬಂಕ್'ಗಳಿಗೆ ತಗೆದುಕೊಂಡು ಹೋಗಬೇಡಿ. ಯಾಕೆಂದರೆ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ 500 ರೂಪಾಯಿ ನೋಟಿನ ಚಲಾವಣೆಗೂ ಬ್ರೇಕ್ ಹಾಕಿದ್ದು , ಟೋಲ್ ಗಳಲ್ಲಿ  ಶುಲ್ಕ ಸಂಗ್ರಹಣೆಗೂ ಮುಂದಾಗಿದೆ.

ನವದೆಹಲಿ(ನ.03): ಹಾಗೋ ಇಗೋ ನಿಮ್ಮ ಹತ್ತಿರ 500 ರೂಪಾಯಿ ನೋಟ್ ಉಳಿದುಕೊಂಡಿದ್ದರೆ ಅದನ್ನು ಆಸ್ಪತ್ರೆ, ಪೆಟ್ರೋಲ್ ಬಂಕ್'ಗಳಿಗೆ ತಗೆದುಕೊಂಡು ಹೋಗಬೇಡಿ. ಯಾಕೆಂದರೆ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ 500 ರೂಪಾಯಿ ನೋಟಿನ ಚಲಾವಣೆಗೂ ಬ್ರೇಕ್ ಹಾಕಿದ್ದು , ಟೋಲ್ ಗಳಲ್ಲಿ  ಶುಲ್ಕ ಸಂಗ್ರಹಣೆಗೂ ಮುಂದಾಗಿದೆ.

ಕೇಂದ್ರ ಸರ್ಕಾರ ಹಳೆಯ 500, 1000 ರೂಪಾಯಿ ನೋಟ್ಗಳನ್ನು ಬ್ಯಾನ್ ಮಾಡಿದೆ. ಆದರೆ ಇದರಿಂದ ಜನಸಾಮಾನ್ಯರು ಮಾತ್ರ ಇನ್ನು ಸುಧಾರಣೆ ಕಂಡಿಲ್ಲ. ಇದರ ನಡುವೆಯೇ ಡಿಸೆಂಬರ್ 15ರ ವರೆಗೂ ಹಳೆಯ 500 ರೂಪಾಯಿ ನೋಟ್ ಅನ್ನು ಪೆಟ್ರೋಲ್‌ ಬಂಕ್​​​, ಏರ್​​ ಟಿಕೆಟ್, ಟೋಲ್, ಆಸ್ಪತ್ರೆ, ಮೆಡಿಕಲ್ ಶಾಪ್, ನೀರಿನ ಬಿಲ್, ವಿದ್ಯುತ್ ಬಿಲ್​ ಹಾಗೂ ಎಲ್‌ಪಿಜಿ ಖರೀದಿಗೆ ಬಳಸಬಹುದಾಗಿತ್ತು ಎಂದು ಘೋಷಿಸಿದ್ದ ಕೇಂದ್ರ ಸರ್ಕಾರ, ಈಗ ತನ್ನ ನಿಲುವನ್ನು ಬದಲಿಸಿದೆ. ಡಿಸಂಬರ್  15 ರವರೆಗೂ ಇದ್ದ ಗಡುವನ್ನು ನಿನ್ನೆ ಮಧ್ಯ ರಾತ್ರಿಗೆ ಕಡಿತಗೊಳಿಸಿದ್ದು , ಡಿಸೆಂಬರ್ 31 ಹಳೆಯ ನೋಟುಗಳ ಜಮಾವಣೆಗೆ ಕೊನೆಯ ದಿನವಾಗಿದ್ದು, ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇರಲ್ಲ ಅಂತ ಸ್ಪಷ್ಟನೆ ನೀಡಿದೆ.     

ಇದರ ನಡುವೆ ಚಿಲ್ಲರೆ ಸಮಸ್ಯೆಯಿಂದಾಗಿ ಟೋಲ್'ಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ತೆಗೆದುಕೊಂಡಿದ್ದ ನಿರ್ಧಾರವನ್ನು ಸಹ ಹಿಂಪಡೆದಿದೆ. ಇದರಿಂದಾಗಿ ದೇಶವ್ಯಾಪಿ ಟೋಲ್ ಗಳಲ್ಲಿ ನೀಡುತ್ತಿದ್ದ  ಉಚಿತ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ನಿನ್ನೆ ಮಧ್ಯರಾತ್ರಿಯಿಂದಲೇ ಟೋಲ್ ಗಳಲ್ಲಿ ಶುಲ್ಕವನ್ನು ಪಡೆಯುತ್ತಿದ್ದು ಉಚಿತ ಸೇವೆಯನ್ನು ಸ್ಥಗಿತಗೊಳಿಸಿದೆ .

ಒಟ್ನಲ್ಲಿ 500, 1000 ರೂಪಾಯಿ ನೋಟುಗಳು ಇನ್ನು ಮುಂದೆ ನೆನಪು ಮಾತ್ರ. ಹಾಗಾಗಿ 500 1000 ನೋಟ್ ಗಳ ಮೌಲ್ಯ ಇತಿಹಾಸದ ಪುಟ ಸೇರಿದ್ದು, ಒಂದೊಮ್ಮೆ ಹಳೆಯ ನೋಟುಗಳು ನಿಮ್ಮ ಬಳಿ ಇನ್ನೂ ಇವೆ ಎಂದಾದಲ್ಲಿ ಇದೇ ಡಿಸೆಂಬರ್ 31ರೊಳಗೆ  ಅವುಗಳನ್ನು ಬ್ಯಾಂಕ್​ಗಳಲ್ಲಿ ಡೆಪಾಸಿಟ್​ಗೆ ಅವಕಾಶ ಮಾಡಿಕೊಡಲಾಗಿದೆ. ಈ ಗಡುವಿನೊಳಗೆ ಹಳೆಯ ನೋಟುಗಳನ್ನು ಡೆಪಾಸಿಟ್ ಮಾಡಿಕೊಳ್ಳಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ ಕೈ-ಬಿಜೆಪಿ ನಡುವೆ ಗದ್ದಲ
ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!