
ನವದೆಹಲಿ(ನ.08): ಕಪ್ಪು ಹಣ ಮತ್ತು ಭಯೋತ್ಪಾದನೆ ಕಡಿವಾಣ ಹಾಕುವ ದೃಷ್ಟಿಯಿಂದ ಇಂದು ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನ ಮಧ್ಯರಾತ್ರಿಯಿಂದಲೇ ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.
- 500, 1000 ರೂ. ನೋಟುಗಳ ಮುದ್ರಣ ಬಂದ್
- ಇಂದು ಮಧ್ಯರಾತ್ರಿಯಿಂದಲೇ ನೋಟು ಬಂದ್
- ನೋಟುಗಳನ್ನು ವಾಪಸ್ ನೀಡಲು 50 ದಿನ ಗಡುವು
- 50 ದಿನಗಳ ಒಳಗಾಗಿ ನೋಟುಗಳನ್ನು ಬ್ಯಾಂಕ್ಗೆ ನೀಡಿ
- ಕಪ್ಪು ಹಣದ ವಹಿವಾಟು ತಡೆಯಲು ಕೇಂದ್ರದ ಹೆಜ್ಜೆ
- ಕಪ್ಪು ಹಣದ ವಿರುದ್ಧ ಕೇಂದ್ರದ ಕೊನೆಯ ಅಸ್ತ್ರ
- ಬ್ಯಾಂಕ್, ಪೋಸ್ಟ್ ಆಫೀಸ್ನಲ್ಲಿ ನೋಟು ಬದಲಿಸಿಕೊಳ್ಳಿ
- ಖೋಟಾ ನೋಟುಗಳ ವಹಿವಾಟು ಉಗ್ರರಿಗೆ ಲಾಭವಾಗುತ್ತಿದೆ
- ಗುರುತಿನ ಪತ್ರ ನೀಡಿ, ನೋಟುಗಳನ್ನು ವಾಪಸ್ ಮಾಡಿ
- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ತೋರಿಸಿ ಬದಲಿಸಿಕೊಳ್ಳಿ
- ಮತದಾರರ ಗುರುತಿನ ಪತ್ರ ತೋರಿಸಿ ಬದಲಿಸಿಕೊಳ್ಳಿ
- 500, 1000 ರೂ. ನೋಟು ಇನ್ನು ಮುಂದೆ ಇರಲ್ಲ
- ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಬ್ರಹ್ಮಾಸ್ತ್ರ
- ನವೆಂಬರ್ 09, 10ರಂದು ಎಟಿಎಂ ಮೆಷಿನ್ ಕೆಲಸ ಮಾಡಲ್ಲ
- ನಾಳೆ, ನಾಳಿದ್ದು ಎಟಿಎಂ ಮೆಷಿನ್ ಇರುವುದಿಲ್ಲ
- ನಾಳೆ, ನಾಳಿದ್ದು ಎಟಿಎಂಗೆ ಹೋದರೂ ಹಣ ಸಿಗಲ್ಲ
- ಬ್ಯಾಂಕ್ನಲ್ಲಿ ನಗದು ರಹಿತ ವಹಿವಾಟಿಗೆ ತೊಂದರೆ ಇಲ್ಲ
- ತಕ್ಷಣದಿಂದಲೇ 500, 1000 ರೂ. ವಹಿವಾಟು ಬಂದ್
- ನೋಟು ವಾಪಸ್ ನೀಡಲು ಡಿಸೆಂಬರ್ 30 ಡೆಡ್ಲೈನ್
- ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಣ ವಿನಿಮಯ
- 100, 50, 20, 10, 5 ರೂ. ಮಾತ್ರವೇ ಕಾನೂನುಬದ್ಧ
- 500, 1000 ರೂ. ನೋಟುಗಳಿಗೆ ಇನ್ನು ಮುಂದೆ ಮಾನ್ಯತೆ ಇಲ್ಲ
- ಎಟಿಎಂನಲ್ಲಿ ಪ್ರತಿದಿನ 2 ಸಾವಿರ ಮಾತ್ರ ಹೊರತೆಗೆಯಬಹುದು
- ನವೆಂಬರ್ 9ರಂದು ಎಲ್ಲ ಬ್ಯಾಂಕ್ಗಳೂ ತೆರೆದಿರುತ್ತವೆ
- ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್ಗಳಲ್ಲೂ ಹಣ ಬದಲಾಯಿಸಿಕೊಳ್ಳಿ
- 2 ಸಾವಿರ ನೋಟು ಚಲಾವಣೆಗೆ ಆರ್ಬಿಐ ಒಪ್ಪಿದೆ
- ಮುಂದಿನ ದಿನಗಳಲ್ಲಿ 2 ಸಾವಿರ ರೂ. ನೋಟು ಚಲಾವಣೆಗೆ ಬರಲಿದೆ
- ಏಪ್ರಿಲ್ 2017ರ ಬಳಿಕ ಹೊಸ ನೋಟುಗಳು ಚಲಾವಣೆಗೆ ಬರಲಿವೆ
- ಸ್ವಲ್ಪ ದಿನಗಳ ಬಳಿಕ ಹೊಸ 500, 2000 ನೋಟು ಬರಲಿವೆ
- ಆನ್ಲೈನ್ ವ್ಯವಹಾರಕ್ಕೆ ಯಾವುದೇ ಅಡ್ಡಿಇಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.