50 ಶ್ರೀಮಂತ ರೈತರ ಮೇಲೆ ಆದಾಯ ತೆರಿಗೆ ನಿಗಾ

By Suvarna Web DeskFirst Published Sep 20, 2017, 4:11 PM IST
Highlights

50 ಲಕ್ಷ ರು.ಗಿಂತಲೂ ಹೆಚ್ಚಿನ ಆದಾಯ ಹೊಂದಿರುವ 50 ರೈತರ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇರಿಸಿದೆ ಎಂದು ವಿದೇಶೀ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಕೃಷಿ ಮೇಲೆ ತೆರಿಗೆ ಇಲ್ಲದ ಕಾರಣ ಅನೇಕರು ಕಪ್ಪು ಹಣವನ್ನು ಕೃಷಿ ಆದಾಯ ಎಂದು ತೋರಿಸಿಕೊಂಡು ಬಿಳಿ ಮಾಡುವುದು ನಡೆದೇ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿಗಾ ಇರಿಸಲಾಗಿದೆ ಎಂದು ಹೇಳಲಾಗಿದೆ.

ನವದೆಹಲಿ: 50 ಲಕ್ಷ ರು.ಗಿಂತಲೂ ಹೆಚ್ಚಿನ ಆದಾಯ ಹೊಂದಿರುವ 50 ರೈತರ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇರಿಸಿದೆ ಎಂದು ವಿದೇಶೀ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಕೃಷಿ ಮೇಲೆ ತೆರಿಗೆ ಇಲ್ಲದ ಕಾರಣ ಅನೇಕರು ಕಪ್ಪು ಹಣವನ್ನು ಕೃಷಿ ಆದಾಯ ಎಂದು ತೋರಿಸಿಕೊಂಡು ಬಿಳಿ ಮಾಡುವುದು ನಡೆದೇ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿಗಾ ಇರಿಸಲಾಗಿದೆ ಎಂದು ಹೇಳಲಾಗಿದೆ.

2016ರ ಮಾರ್ಚ್‌ನಲ್ಲಿ ವಿತ್ತ ಖಾತೆ ರಾಜ್ಯ ಸಚಿವ ಎಸ್.ಕೆ. ಗಂಗ್ವಾರ್ ಅವರು 1 ಕೋಟಿ ರು.ಗಿಂತ ಹೆಚ್ಚು ಆದಾಯವುಳ್ಳ ರೈತರ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇಡಲಿದೆ ಎಂದಿದ್ದರು.

ನಿಯಮಾನುಸಾರ ದೇಶದಲ್ಲಿ ಕೃಷಿ ಮೇಲೆ ತೆರಿಗೆ ಇಲ್ಲ. ಕೃಷಿಯನ್ನು ತೆರಿಗೆ ವ್ಯಾಪ್ತಿಗೆ ತರಲು ಸಂವಿಧಾನ ತಿದ್ದುಪಡಿ ಮಾಡಬೇಕು. ನೀತಿ ಆಯೋಗವು ಕೃಷಿ ಉತ್ಪನ್ನಗಳನ್ನೂ ತೆರಿಗೆ ವ್ಯಾಪ್ತಿಗೆ ತನ್ನಿ ಎಂದು ಕಳೆದ ವರ್ಷ ಹೇಳಿತ್ತಾದರೂ ಈ ವಿವಾದಿತ ಕ್ರಮಕ್ಕೆ ಕೈ ಹಾಕಲು ವಿತ್ತ ಸಚಿವ ಅರುಣ್ ಜೇಟ್ಲಿ ನಿರಾಕರಿಸಿದ್ದರು.

(ಸಾಂದರ್ಭಿಕ ಚಿತ್ರ)

click me!