
ಹೈದರಾಬಾದ್: ಹಡೆದವ್ವ ಮೃತಪಟ್ಟಿದ್ದಾಳೆಂಬ ಅರಿವೇ ಇಲ್ಲದ ಪುಟ್ಟ ಕಂದಮ್ಮನೊಂದು, ರಾತ್ರಿ ಇಡೀ ಅಮ್ಮನ ಶವದ ಮೇಲೆಯೇ ಮಲಗಿದ ಮನ ಕಲಕುವ ಘಟನೆ ಇಲ್ಲಿಯ ಒಸ್ಮಾನೀಯಾ ಆಸ್ಪತ್ರೆಯಲ್ಲಿ ನಡೆದಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಚಿಕಿತ್ಸೆಗೆಂದು ಆಸ್ಪತ್ರೆಗೆ, ತನ್ನ ಐದು ವರ್ಷದ ಮಗನೊಟ್ಟಿಗೆ ಆಗಮಿಸಿದ್ದಳು. ಆದರೆ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು.
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ತಾಯಿ ಮಲಗಿದ ಹಾಸಿಗೆ ಮೇಲೆ ಹತ್ತಿದ ಐದು ವರ್ಷದ ಮಗ, ಆಕೆಯ ಮೈ ಮೇಲೆಯೇ ಮಲಗಿತ್ತು. ಯಾವಾಗ ಅಮ್ಮನ ಪ್ರಾಣ ಪಕ್ಷಿ ಹಾರಿ ಹೋಗಿತ್ತೋ ಗೊತ್ತಿಲ್ಲ. ವೈದ್ಯರು ಗಮನಿಸಿದಾಗ ಮಹಿಳೆಯ ಜೀವ ಹೋಗಿತ್ತು. ಮಗು ಅಮ್ಮನ ಮಡಿಲು ಬೆಚ್ಚಗಿದೆ ಎಂದೇ ತಿಳಿದು, ನಿದ್ರಿಸುತ್ತಿತ್ತು.
ವಾರಸುದಾರರೇ ಇಲ್ಲದ ಈ ಮಹಿಳೆ ಶವವನ್ನು ಹಾಗೂ ಪುಟ್ಟ ಮಗುವನ್ನು ಯಾರಿಗೆ ಹಸ್ತಾಂತರಿಸಬೇಕೆಂದು ತಿಳಿಯದ ವೈದ್ಯರು, ಪೊಲೀಸರು ಹಾಗೂ ಎನ್‌ಡಿಒ ನೆರವು ಪಡೆದಿದ್ದಾರೆ. ಕುಟುಂಬದ ಸದಸ್ಯರನ್ನು ಕಂಡು ಹಿಡಿದು, ಮಹಿಳೆಯ ಮೃತ ದೇಹ ಹಾಗೂ ಮಗುವನ್ನು ಹಸ್ತಾಂತರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.