ಹೊಲದಲ್ಲಿ ರೈತನ ಬೆಳೆ ಕಾಯಲು ಸನ್ನಿ ಲಿಯೋನ್

By Suvarna Web DeskFirst Published Feb 14, 2018, 1:37 PM IST
Highlights

ವರ್ಷಪೂರ್ತಿ ಕಷ್ಟ ಪಟ್ಟು ಹೊಲದಲ್ಲಿ ಬೆಳೆದಿರುವ ಫಸಲನ್ನು ಪ್ರಾಣಿ ಮತ್ತು ಪಕ್ಷಿಗಳ ಹಾವಳಿಯಿಂದ ತಡೆಯಲು ಬೆದರು ಬೊಂಬೆಗಳನ್ನು ಅಳವಡಿಸುವುದು ಹೊಸದೇನಲ್ಲ. ಆದರೆ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಅನ್ನದಾತನೋರ್ವ 10 ಎಕರೆಗಳಲ್ಲಿ ಬೆಳೆದಿರುವ ತರಕಾರಿ ಬೆಳೆ ಮೇಲೆ ಗ್ರಾಮಸ್ಥರ ಕೆಟ್ಟ ದೃಷ್ಟಿ ಬೀಳದಂತೆ ಬಾಲಿವುಡ್‌ನ ಮೋಹಕ ನಟಿ ಸನ್ನಿ ಲಿಯೋನ್ ಮೊರೆ ಹೋಗಿದ್ದಾರೆ.

ಹೈದರಾಬಾದ್: ವರ್ಷಪೂರ್ತಿ ಕಷ್ಟ ಪಟ್ಟು ಹೊಲದಲ್ಲಿ ಬೆಳೆದಿರುವ ಫಸಲನ್ನು ಪ್ರಾಣಿ ಮತ್ತು ಪಕ್ಷಿಗಳ ಹಾವಳಿಯಿಂದ ತಡೆಯಲು ಬೆದರು ಬೊಂಬೆಗಳನ್ನು ಅಳವಡಿಸುವುದು ಹೊಸದೇನಲ್ಲ. ಆದರೆ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಅನ್ನದಾತನೋರ್ವ 10 ಎಕರೆಗಳಲ್ಲಿ ಬೆಳೆದಿರುವ ತರಕಾರಿ ಬೆಳೆ ಮೇಲೆ ಗ್ರಾಮಸ್ಥರ ಕೆಟ್ಟ ದೃಷ್ಟಿ ಬೀಳದಂತೆ ಬಾಲಿವುಡ್‌ನ ಮೋಹಕ ನಟಿ ಸನ್ನಿ ಲಿಯೋನ್ ಮೊರೆ ಹೋಗಿದ್ದಾರೆ.

ಹೌದು. ಕೆಂಪು ಬಿಕಿನಿ ತೊಟ್ಟ ಸನ್ನಿಲಿಯೋನ್‌ಳ ಪೋಸ್ಟರ್‌ವೊಂದನ್ನು ಹೊಲದ ಗಡಿಯಲ್ಲಿ ಅಳವಡಿಸಿದ್ದು, ಆ ಪೋಸ್ಟರ್ ಮೇಲೆ ‘ಹೇ, ನನ್ನನ್ನು ಕಂಡು ಮರುಗಬೇಡ’ ಎಂದು ತೆಲಗು ಭಾಷಣೆಯಲ್ಲಿ ಈ ಬಗ್ಗೆ ಮಾತನಾಡಿದ ಬಂಡ ಕಿಂಡಿ ಪಲ್ಲೆ ಗ್ರಾಮದ ರೈತ ಚೆಂಚಿರೆಡ್ಡಿ(45), ಮೊದಲು ನನ್ನ ಹೊಲದ ಬೆಳೆಗಳ ಮೇಲೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದವರು ಇದೀಗ, ಸನ್ನಿ ಲಿಯೋನ್ ಪೋಸ್ಟರ್ ಅನ್ನು ನೋಡುವಲ್ಲಿ ಮಾತ್ರವೇ ಮಗ್ನರಾಗುತ್ತಿದ್ದಾರೆ.

ಹಾಗಾಗಿ ನನ್ನ ಆಲೋಚನೆ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ‘ಪ್ರಸ್ತುತ ವರ್ಷ 10 ಎಕರೆಯ ಹೊಲದಲ್ಲಿ ಒಳ್ಳೆಯ ಬೆಳೆಯನ್ನು ಬೆಳೆದಿದ್ದೇನೆ. ಇದರ ಮೇಲೆ ಗ್ರಾಮಸ್ಥರು ಮತ್ತು ನನ್ನ ಹೊಲದ ಹಾದಿ ಮುಖಾಂತರ ಹಾದು ಹೋಗುವ ದಾರಿಹೋಕರು ಕೆಟ್ಟ ದೃಷ್ಟಿ ನೆಡುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶಕ್ಕಾಗಿಯೇ ಕೆಲ ದಿನಗಳ ಹಿಂದೆ ಸನ್ನಿ ಲಿಯೋನ್ ಪೋಸ್ಟರ್ ಹಾಕಿದ್ದೇನೆ,’ ಎಂದು ಹೇಳಿದ್ದಾರೆ.

click me!