ಹಳದಿ ಸೀರೆಯ ಎಲೆಕ್ಷನ್ ಆಫೀಸರ್‌ನ ಈ ವಿಡಿಯೋಗೆ ನೆಟ್ಟಿಗರು ಫಿದಾ!

Published : Jul 30, 2019, 02:33 PM IST
ಹಳದಿ ಸೀರೆಯ ಎಲೆಕ್ಷನ್ ಆಫೀಸರ್‌ನ ಈ ವಿಡಿಯೋಗೆ ನೆಟ್ಟಿಗರು ಫಿದಾ!

ಸಾರಾಂಶ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಿಂಚಿದ್ದ ರೀನಾ ದ್ವಿವೇದಿ ಮತ್ತೆ ಸೌಂಡ್ ಮಾಡ್ತಿದ್ದಾರೆ| ಫೋಟೋ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದ ಬೆಡಗಿ ಈಗ ಸಪ್ನಾ ಚೌಧರಿ ಡಾನ್ಸ್‌ಗೆ ಸೊಂಟ ಬಳುಕಿಸಿದ್ರು| ಹಳದಿ ಸೀರೆಯುಟ್ಟು ಮಿಂಚಿದಾಕೆಯ ಡಾನ್ಸ್ ವೈರಲ್

ನವದೆಹಲಿ[ಜು.30]: ಲೋಕಸಭಾ ಚುನಾವಣಾ ಸಂದರ್ಭದಲ್ಲಿ PWD ಅಧಿಕರಿ ರೀನಾ ದ್ವಿವೇದಿ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದರು. ಹಳದಿ ಸೀರೆಯುಟ್ಟುಕೊಂಡಿದ್ದ ಅವರ ಫೋಟೋಗಳು ಭಾರೀ ವೈರಲ್ ಆಗಿದ್ದವು. ಇವಿಎಂ ಮಶೀನ್ ಹಿಡಿದುಕೊಂಡು ಮತಗಟ್ಟೆಗೆ ಆಗಮಿಸುತ್ತಿದ್ದ ವೇಳೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದ ಫೋಟೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದರು. ಬಳಿಕ ಇವರು ಹಳದಿ ಸೀರೆಯ ಬೆಡಗಿ ಎಂದೇ ಫೇಮಸ್ ಆದರು. ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವ ಇಚ್ಛೆ ಇಟ್ಟುಕೊಂಡಿರುವ ರೀನಾ ವಿಡಿಯೋ ಒಂದು ಸದ್ಯ ಭಾರೀ ವೈರಲ್ ಆಗುತ್ತಿದೆ.

ಹಳದಿ ಸೀರೆಯುಟ್ಟು ಇವಿಎಂ ಹಿಡಿದಿದ್ದ ಅಧಿಕಾರಿ ವೈರಲ್!: ಯಾರು ಆ ಸುಂದರಿ?

ಹೌದು ಅಂದು ಹಳದಿ ಸೀರೆಯುಟ್ಟುಕೊಂಡು ಫೋಸ್ ಕೊಟ್ಟಿದ್ದ ರೀನಾ ಇಂದು ಹಸಿರು ವರ್ಣದ ಸೀರೆಯುಟ್ಟು ಸೊಂಟ ಬಳುಕಿಸಿದ್ದಾರೆ. ಹಿಂದಿ ಬಿಗ್ ಬಾಸ್ ಖ್ಯಾತಿಯ ಹರ್ಯಾಣ ಡಾನ್ಸರ್ ಸಪ್ನಾ ಚೌಧರಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿರುವ ರೀನಾ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಖುದ್ದು ರೀನಾ ದ್ವಿವೇದಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ರೀನಾರಿಗೆ ಅದಿತ ಹೆಸರಿನ ಓರ್ವ ಪುತ್ರನಿದ್ದಾನೆ, ಆತ 9ನೇ ತರಗತಿ ವಿದ್ಯಾರ್ಥಿ ಎಂಬುವುದು ಉಲ್ಲೇಖನೀಯ. 

ಹಳದಿ ಸೀರೆ ಚುನಾವಣಾಧಿಕಾರಿ: ಕರ್ತವ್ಯಕ್ಕೆ ಸೌಂದರ್ಯವೇ ಮಾರಿ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ