ಮೋದಿ ಮತ್ತೆ ಅಧಿಕಾರಕ್ಕೇರಲು ಏನು ಮಾಡಬೇಕು? ಅದ್ಭುತ ಸಲಹೆ

By Web DeskFirst Published Dec 11, 2018, 7:43 PM IST
Highlights

2019ರಲ್ಲಿ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಏನು ಮಾಡಬೇಕು ಎಂಬುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಂದಿರುವ ಒಂದು ಸಲಹೆ ನಿಜಕ್ಕೂ ಇಂದಿನ ವ್ಯವಸ್ಥೆಯನ್ನು, ಫಲಿತಾಂಶವನ್ನು ತನ್ನ ವಿಡಂಬನಾತ್ಮಕ ಶಬ್ದಗಳಿಂದ ಕಟುವಾಗಿ ಖಂಡಿಸಿದೆ. 

ಈ ಕೆಳಗಿನ ಸಲಹೆಗಳೂ ತುಸು ಗಂಭೀರತೆಯನ್ನು ಮೀರಿದೆ ಎಂದುಕೊಂಡರೂ ವಿಡಂಬನಾತ್ಮಕ ಶಬ್ದಗಳಿಂದ ವ್ಯವಸ್ಥೆಯ ಟೀಕೆ ಮಾಡಿದೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿಗೆ ಬರೆದ ಬಹಿರಂಗ ಪತ್ರ ಎಂದು ಅಂದುಕೊಳ್ಳಿ...

ಹಲೋ ಮಿಸ್ಟರ್ ಮೋದಿ, ನೀವು ಬರಿ ಭಾರತವನ್ನು ಅರಿತರೆ ಸಾಲದು ಜೊತೆಗೆ ಭಾರತೀಯರನ್ನು ಸಹ ಅರಿಯಬೇಕು...

ಸತ್ಯ ಹೇಳೀ ನೀವು ಅಧಿಕಾರಕ್ಕೆ ಬಂದಾಗಿನಿಂದ ಒಂದಾದ್ರು ಪುಕ್ಸಟ್ಟೆ ಯೋಜನೆ ಕೊಟ್ಟಿದ್ದೀರಾ, ಅಥ್ವಾ ಓಲೈಕೆ ಏನಾದ್ರೂ ಮಾಡಿದ್ದೀರಾ?...ಹೂಹ್ಞು ಯಾವ್ದು ಇಲ್ಲ ಬರಿ ಕೆಲಸ ಕೆಲಸ ಕೆಲಸ ಇಷ್ಟೇ ನಿಮ್ಮ  ಜೀವನ...

ಬಿಜೆಪಿ ಗೆಲುವಿನ ಕುದುರೆ ಕಟ್ಟಿಹಾಕಿದ್ದು ಕರ್ನಾಟಕ.. ಅಂಕಿ ಅಂಶ ಇಲ್ಲಿದೆ..

ದೇಶದ ಸಾಲ ತೀರಿಸುತ್ತೇನೆ, ಅಭಿವೃದ್ಧಿಯ ಕ್ರಾಂತಿ ಮಾಡ್ತೀನಿ ಅಂತ ಹಗಲಿರುಳು ದುಡಿತ ಕುಂತ್ರೆ ಇಲ್ಲಿ ನಮ್ಗೆ ಪುಕ್ಸಟ್ಟೆ ಯೋಜನೆ ಕೊಡೋದ್ ಯಾರು? 

ನೋಡಿ ಸ್ವಾಮಿ ನ್ಯಾಯ ನೀತಿ ಧರ್ಮ ಅಂತ ಕೆಲಸ ಮಾಡಿದ್ದಕ್ಕೆ ನಿಮ್ ಗುರುಗಳು ಅಟಲ್ ಗೆ ಮರೆಯಲಾರದ ಸೋಲು ಕೊಟ್ಟವರು ನಮ್ ಜನ, ಇನ್ನು ನೀವು ಸಹ ಅದೇ ಮಾರ್ಗದಲ್ಲಿ ಇದ್ದಿರಾ? ಈಗ  ನಿಮ್ಮ ಕೈ ಕೂಡ ಬಿಡ್ತಾರೆ ನೋಡ್ತಾ ಇರಿ...

ನಿಮ್ಮನ್ನು ಸೋಲಿಸೋದಿಕ್ಕೆ ಅದೆಷ್ಟು ಪಕ್ಷಗಳು ಒಂದಾಗಿ ಹಗಲಿರುಳು ಕಷ್ಟ ಪಡ್ತಿವೆ ನೋಡಿ, ಆದ್ರೆ ನಮ್ ಜನಕ್ಕೆ ಇದೇ ನರಿಗಳೇ ಬೇಕು , ಯಾಕಂದ್ರೆ ಜಾತಿ ಮುಖ್ಯ  ಅದಕ್ಕೆ...

ನೋಟ್ ಬ್ಯಾನ್ ಮಾಡೋ ಅವಶ್ಯಕತೆ ಏನಿತ್ತು, ಭ್ರಷ್ಟ ಅಂತ ಗೊತ್ತಿದ್ರು ಅವ ನಮ್ ಜಾತಿಯವ ಅಂತ ಅವನನ್ನೇ ಗೆಲ್ಲಿಸುವ ಮನಸ್ಥಿತಿ ನಮ್ ಜನರದ್ದು, ಭ್ರಷ್ಟಾಚಾರ ಕಡಿಮೆ ಮಾಡೋಕೆ ನೀವು ಕಷ್ಟ ಪಟ್ಟರೆ ಆದ್ರೆ ನಮ್ ಜನಕ್ಕೆ ಅದರ ಅವಶ್ಯಕತೆ ಇಲ್ಲ...

ನೀವು ನೂರು ಸಲ ಭಾತ್‌ ಮಾತಾಕೀ ಜೈ ಅಂತ ಹೇಳಿ... ಊಹ್ಹೂ ನಮಗೆ ನಮ್ ಜಾತಿಯವನೇ ಮುಖ್ಯ ನಮಗೆ ಅವನೇ ಗೆಲ್ಲಬೇಕು ಅಷ್ಟೇ ನಾವ್ ಜೈಕಾರ ಹಾಕೋದು ಕೂಡ ನಮ್ ಜಾತಿಯವನಿಗೆ...

ರಾಹುಲ್  ಗಾಂಧಿ ಭಾರತದ ಹೊಸ ಬಾಹುಬಲಿ

ಬಿಜೆಪಿಯಿಂದ ನೀವೋಬ್ಬರೆ ಕೆಲಸ ಮಾಡಿದ್ರೆ ಸಾಲ್ದು ಬೇರೆ ನಾಯಕರು ಸಹ ಕೆಲಸ ಮಾಡ್ಬೇಕು,  ನಿಮ್ಮನ್ನು ನೋಡಿದ್ರೆ ಒಮ್ಮೊಮ್ಮೆ ಅಯ್ಯೋ ಅನ್ಸುತ್ತೆ, ಒಬ್ನೆ ಅದೆಷ್ಟ್ ಕಷ್ಟ ಪಡ್ತಿದಿಯಾ ಅಂತ...

ಅಧಿಕಾರ ಇಲ್ದಿದ್ರು ನಿಮಗೆ ಎಲ್ಲವೂ ಒಂದೆಡ, ಆದ್ರೆ ನಮ್ ಕಥೆ ಹೇಳು? ಒಂದ್ ಗ್ರಾಮ ಪಂಚಾಯತಿ ಅಧ್ಯಕ್ಷ ಅಗೋದಿಕ್ಕೂ ಯೋಗ್ಯತೆ ಇಲ್ಲದವರೆಲ್ಲ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ, ನಮಗಿರುವ ಭಯ ಕೂಡ ಅದೇ , ಅಕಸ್ಮಾತ್ ಈ ಮೂರ್ಖರ ಕೈಗೆ ದೇಶವನ್ನು ಕೊಟ್ರೆ ಕೆಲವೇ ವರ್ಷಗಳಲ್ಲಿ ದೇಶವನ್ನು ತುಂಡು ತುಂಡು ಮಾಡಿ ಹರಿದು ಹಂಚಿ ಬಿಡ್ತಾರೆ... 

ದುಡ್ ಹೋದ್ರು ಪರ್ವಾಗಿಲ್ಲ ಜನರನ್ನು ಸೆಳೆಯುವ ಯಾವ್ದಾದ್ರೂ ಯೋಜನೆ ಮಾಡಿ... ಸದ್ಯಕ್ಕೆ ನಿನ್ ಬಿಟ್ರೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನ ಊಹಿಸಿಕೊಳ್ಳೋದಿಕ್ಕೂ ಕಷ್ಟ ಆಗ್ತಿದೆ... !

click me!