#Exclusive- ಗ್ರಾಹಕ ಸ್ನೇಹಿಯಾಗಲು ಹೊರಟ ಎಸ್'ಬಿಐ, 5 ರಾಷ್ಟ್ರೀಕೃತ ಬ್ಯಾಂಕ್'ಗಳು ವಿಲೀನ!

Published : Mar 25, 2017, 04:40 AM ISTUpdated : Apr 11, 2018, 01:02 PM IST
#Exclusive- ಗ್ರಾಹಕ ಸ್ನೇಹಿಯಾಗಲು ಹೊರಟ ಎಸ್'ಬಿಐ, 5 ರಾಷ್ಟ್ರೀಕೃತ ಬ್ಯಾಂಕ್'ಗಳು ವಿಲೀನ!

ಸಾರಾಂಶ

ಏಪ್ರಿಲ್​ 1 ರಿಂದ, ಎಸ್​ಬಿಐ ಬ್ಯಾಂಕ್​ ಜೊತೆ 5 ಬ್ಯಾಂಕ್​ಗಳು ವಿಲೀನಗೊಳ್ಳಲಿವೆ. ಇದರಿಂದ ಏನೆಲ್ಲಾ ಲಾಭಗಳಿವೆ ಎನ್ನುವುದನ್ನು, ಸ್ಟೇಟ್​ಬ್ಯಾಂಕ್​​ ಆಫ್​ ಇಂಡಿಯಾದ ಚೀಫ್​​ ಜನರಲ್ ಮ್ಯಾನೇಜರ್​​ ಆಗಿರುವ ಫಾರೂಕ್​​ ಶಾಹೇಬ್​​, ಸುವರ್ಣನ್ಯೂಸ್​ ಜೊತೆ ಮಾತನಾಡಿದ್ದಾರೆ. ಆ ಎಕ್ಸ್​​ಕ್ಲೂಸಿವ್​​ ಮಾಹಿತಿ ಇಲ್ಲಿದೆ.

ನವದೆಹಲಿ(ಮಾ.25): ಏಪ್ರಿಲ್​ 1 ರಿಂದ, ಎಸ್​ಬಿಐ ಬ್ಯಾಂಕ್​ ಜೊತೆ 5 ಬ್ಯಾಂಕ್​ಗಳು ವಿಲೀನಗೊಳ್ಳಲಿವೆ. ಇದರಿಂದ ಏನೆಲ್ಲಾ ಲಾಭಗಳಿವೆ ಎನ್ನುವುದನ್ನು, ಸ್ಟೇಟ್​ಬ್ಯಾಂಕ್​​ ಆಫ್​ ಇಂಡಿಯಾದ ಚೀಫ್​​ ಜನರಲ್ ಮ್ಯಾನೇಜರ್​​ ಆಗಿರುವ ಫಾರೂಕ್​​ ಶಾಹೇಬ್​​, ಸುವರ್ಣನ್ಯೂಸ್​ ಜೊತೆ ಮಾತನಾಡಿದ್ದಾರೆ. ಆ ಎಕ್ಸ್​​ಕ್ಲೂಸಿವ್​​ ಮಾಹಿತಿ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ, ದೇಶದ ಅತಿ ದೊಡ್ಡ ಬ್ಯಾಂಕ್​ ಎನ್ನುವ ಖ್ಯಾತಿ ಗಳಿಸಿದೆ. ಈ ಬ್ಯಾಂಕ್​ ಜೊತೆ ಏಪ್ರಿಲ್​ 1 ರಿಂದ 5 ಬ್ಯಾಂಕ್'​ಗಳು ವಿಲೀನಗೊಳ್ಳಲಿವೆ. ಸ್ಟೇಟ್​ ಬ್ಯಾಂಕ್ ಆಫ್​ ಮೈಸೂರು, ಸ್ಟೇಟ್​ ಬ್ಯಾಂಕ್​ ಆಫ್​​ ಹೈದ್ರಾಬಾದ್​, ಸ್ಟೇಟ್​ ಬ್ಯಾಂಕ್ ಆಫ್​​ ಟ್ರಾವಂಕೂರ್​, ಸ್ಟೇಟ್ ಬ್ಯಾಂಕ್ ಆಫ್​​ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್​​ ಬಿಕಾನೇರ್ ಮತ್ತು ಜೈಪುರ್​, ಎಸ್​ಬಿಐನಲ್ಲಿ ವಿಲೀನಗೊಳ್ಳಲಿವೆ.

ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ, ನಿರುದ್ಯೋಗಿಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದು, ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ.

5 ಬ್ಯಾಂಕ್​ಗಳು ಎಸ್​ಬಿಐನಲ್ಲಿ ವಿಲೀನಗೊಂಡರೆ, ಅದರ ಆಸ್ತಿ ಮೌಲ್ಯ 37 ಲಕ್ಷ ಕೋಟಿಯಷ್ಟಾಗಲಿದೆ. ಮತ್ತಷ್ಟು ವಿಸ್ತೃತವಾಗಿ ಗ್ರಾಹಕ ಸ್ನೇಹಿಯಾಗಲಿದ್ದು, ಜನರಿಗೆ ಉತ್ತಮ ಸೇವೆ ನೀಡಲು ಈ ವಿಲೀನ ಪ್ರಕ್ರಿಯೆ ಅನುಕೂಲವಾಗಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರಪ್ಪನ್‌ಗಿಂತ, ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಜಾಸ್ತಿ.! ಅಂಕಿ-ಅಂಶ ಬಚ್ಚಿಟ್ಟ ಆರ್. ಅಶೋಕ್
ಲಕ್ಸುರಿ ಕಾರು, 1 ಕೇಜಿ ಚಿನ್ನ 100 ಕೋಟಿ ಆಸ್ತಿ: ಟ್ರಾನ್ಸ್‌ಪೋರ್ಟ್ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ