ಜಾರಕಿಹೊಳಿ ವಿಧಿಸಿದ 5 ಷರತ್ತುಗಳು

Published : Sep 08, 2018, 08:33 AM ISTUpdated : Sep 09, 2018, 10:26 PM IST
ಜಾರಕಿಹೊಳಿ ವಿಧಿಸಿದ 5 ಷರತ್ತುಗಳು

ಸಾರಾಂಶ

ಜಾರಕಿಹೊಳಿ ಬ್ರದರ್ಸ್  - ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪ್ರತಿಷ್ಠೆಯ ಸಮರವಾಗಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಕಡೆಗೂ ಸುಸೂತ್ರವಾಗಿ ನಡೆದಿದೆ. ಆದರೆ  ಚುನಾವಣಾ ಸಂಧಾನದ ವೇಳೆ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಹೈಕಮಾಂಡ್  ಮುಂದೆ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ. 

ಬೆಂಗಳೂರು :  ತನ್ನ ಕ್ಷೇತ್ರವಾದ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿಚಾರಗಳಿಗೆ ಮಾತ್ರ ಲಕ್ಷ್ಮೀ ಹೆಬ್ಬಾಳ್ಕರ್ ಸೀಮಿತವಾಗಬೇಕು.  ಬೆಂಗಳೂರಿನ ಪ್ರಭಾವಿಯ ಶಕ್ತಿ ಬಳಸಿ ಬೆಳಗಾವಿ ಜಿಲ್ಲಾಮಟ್ಟದ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಬೆಳಗಾವಿಯ ವ್ಯವಹಾರಗಳಿಗೆ ಕೈಹಾಕಬಾರದು. 

ಪಿಎಲ್‌ಡಿ ಚುನಾವಣಾ ಸಂಧಾನದ ವೇಳೆ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟ ಪ್ರಮುಖ ಷರತ್ತು ಇದು ಎಂದು ಉನ್ನತ ಮೂಲಗಳು ತಿಳಿಸಿವೆ.  ಬೆಳಗಾವಿ ನಾಯಕರ ಸಂಘರ್ಷ ರಾಜ್ಯ ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆ ನೀಡಿತ್ತು.

  • ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ವಿಚಾರಕ್ಕೆ ಸೀಮಿತವಾಗಬೇಕು
  • ಬೆಂಗಳೂರಿನ ಪ್ರಭಾವ ಬಳಸಿ ಬೆಳಗಾವಿ ಜಿಲ್ಲೆಯ ವ್ಯವಹಾರಗಳಿಗೆ ತಲೆ ಹಾಕಬಾರದು
  • ಹೆಬ್ಬಾಳ್ಕರ್‌ಗೆ ಆಪ್ತರಾದ ಸಚಿವ ಡಿಕೆಶಿ ಬೆಳಗಾವಿ ವಿಚಾರಗಳಲ್ಲಿ ಮೂಗು ತೂರಿಸಬಾರದು
  • ಮಹಿಳಾ ಕೋಟದಲ್ಲಿ ಹೆಬ್ಬಾಳ್ಕರ್‌ಗೆ ಮಂತ್ರಿಸ್ಥಾನ ಕೊಡಿಸುವ ಲಾಬಿಗೆ ಮಣಿಯಬಾರದು
  •  ಮುಂದಿನ ಸಂಪುಟ ವಿಸ್ತರಣೆ ವೇಳೆ ಸತೀಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಬೇಕು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಶ್ಲೀಲ ಕಂಟೆಂಟ್: ಎಕ್ಸ್‌ಗೆ ಕೇಂದ್ರದಿಂದ ನೋಟಿಸ್, 72 ಗಂಟೆಯೊಳಗೆ ಉತ್ತರಿಸಲು ಸೂಚನೆ
ಚುನಾವಣೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಅಬ್ಬರ! ಮತದಾನಕ್ಕೆ ಮೊದಲೇ 66 ಸ್ಥಾನಗಳು ಮೈತ್ರಿ ಪಾಲಿಗೆ!