
ನವದೆಹಲಿ(ಆ.22): ಜಿಎಸ್‌ಟಿ ಜಾರಿಯಾದ ಬಳಿಕ ಮೊದಲ ತಿಂಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ 42 ಸಾವಿರ ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಅಂತಾರಾಜ್ಯ ಸರಕುಗಳ ಸಾಗಾಟದ ಮೇಲೆ ವಿಧಿಸಲಾಗುವ ಜಿಎಸ್‌ಟಿಯಿಂದ 15,000 ಕೋಟಿ ರೂ ಸಂಗ್ರಹವಾಗಿದೆ.
ಕಾರುಗಳು ಮತ್ತು ತಂಬಾಕು ಉತ್ಪನ್ನಗಳಂತಹ ವಸ್ತುಗಳ ಮೇಲಿನ ಸೆಸ್‌ನಿಂದ 5,000 ಕೋಟಿ ರೂ ಸಂಗ್ರಹವಾಗಿದೆ. ಉಳಿದ 22,000 ಕೋಟಿ ರೂ ಕೇಂದ್ರ ಜಿಎಸ್‌ಟಿ ಮತ್ತು ರಾಜ್ಯ ಜಿಎಸ್‌ಟಿಯಿಂದ ಬಂದಿದೆ. ಈ ಮೊತ್ತ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೆಯಾಗಲಿದೆ. ಇದುವರೆಗೆ 10 ಲಕ್ಷ ತೆರಿಗೆದಾರರು ತಮ್ಮ ರಿಟರ್ನ್ಸ್ ಸಲ್ಲಿಸಿದ್ದಾರೆ.
ಇನ್ನೂ 20 ಲಕ್ಷ ಮಂದಿ ಜಿಎಸ್‌ಟಿ ವೆಬ್'ಸೈಟ್‌ಗೆ ಲಾಗಿನ್ ಆಗಿ ತಮ್ಮ ರಿಟರ್ನ್ಸ್ ನಮೂನೆಗಳನ್ನು ಸೇವ್ ಮಾಡಿದ್ದಾರೆ. ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆ ಬಾಧ್ಯತೆ ಹೆಚ್ಚಳವಾಗಿದೆ. ಜಿಎಸ್‌ಟಿ ಜುಲೈ 1ರಿಂದ ದೇಶಾದ್ಯಂತ ಜಾರಿಯಾಗಿದ್ದು, ಉದ್ಯಮಿಗಳು ಪ್ರತಿ ತಿಂಗಳೂ ತಮ್ಮ ತೆರಿಗೆ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಮೊದಲ ತಿಂಗಳ ವಿವರಗಳ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಆಗಸ್ಟ್ 25ರ ವರೆಗೆ ವಿಸ್ತರಿಸಲಾಗಿದೆ.
ಹಳೆಯ ತೆರಿಗೆ ಪದ್ಧತಿಯಲ್ಲಿ 72 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದರೆ, 50 ಲಕ್ಷ ಮಂದಿ ಈಗಾಗಲೇ ಹೊಸ ಜಿಎಸ್‌ಟಿ ಪದ್ಧತಿಗೆ ವಲಸೆಗೊಂಡಿದ್ದಾರೆ. 15 ಲಕ್ಷ ಹೊಸ ನೋಂದಣಿಯಾಗಿದೆ. 10 ಲಕ್ಷ ಮಂದಿ ಜುಲೈನ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.