ಕನ್ನಡಿಗ ಎಸ್.ವಿ. ಸುನೀಲ್ ಹಾಗೂ ಪ್ರಕಾಶ್ ನಂಜಪ್ಪಗೆ ಅರ್ಜುನ ಪ್ರಶಸ್ತಿ

By Suvarna Web DeskFirst Published Aug 22, 2017, 4:16 PM IST
Highlights

ಕೇಂದ್ರ ಸರ್ಕಾರವು ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಹಾಗೂ ವಿಶಿಷ್ಟ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೊಡಮಾಡುವ ಅರ್ಜುನ ಪ್ರಶಸ್ತಿಗೆ ಕರ್ನಾಟಕದ ಎಸ್.ವಿ. ಸುನೀಲ್ ಹಾಗೂ ಶೂಟರ್ ಪಿ.ಎನ್. ಪ್ರಕಾಶ್ ಆಯ್ಕೆಯಾಗಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರವು ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಹಾಗೂ ವಿಶಿಷ್ಟ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೊಡಮಾಡುವ ಅರ್ಜುನ ಪ್ರಶಸ್ತಿಗೆ ಕರ್ನಾಟಕದ ಎಸ್.ವಿ. ಸುನೀಲ್ ಹಾಗೂ ಶೂಟರ್ ಪಿ.ಎನ್. ಪ್ರಕಾಶ್ ಆಯ್ಕೆಯಾಗಿದ್ದಾರೆ.

2017ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಗಳ ಪಟ್ಟಿ ಇಂದು ಬಿಡುಗಡೆಯಾಗಿದ್ದು ಹಾಕಿ ಆಟಗಾರ ಎಸ್.ವಿ. ಸುನೀಲ್ ಹಾಗೂ ಶೂಟರ್ ಪಿ.ಎನ್. ಪ್ರಕಾಶ್ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಇಬ್ಬರು, ದ್ರೋಣಾಚಾರ್ಯ ಪ್ರಶಸ್ತಿಗೆ 7 ಮಂದಿ, ಅರ್ಜುನ ಪ್ರಶಸ್ತಿಗೆ 17 ಮಂದಿ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಗೆ 3 ಮಂದಿ ಆಯ್ಕೆಯಾಗಿದ್ದಾರೆ.

ಇದೇ ಆ.29ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪದಕ ಹಾಗೂ ಪ್ರಶಸ್ತಿಯ ಜೊತೆಗೆ, ರಾಜೀವ್ ಗಾಂಧಿ ಖೆಲ್ ರತ್ನ ಪ್ರಶಸ್ತಿ ವಿಜೇತರಿಗೆ ರೂ.7.5 ಲಕ್ಷ ನಗದು, ಹಾಗೂ ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್’ಚಂದ್ ಪ್ರಶಸ್ತಿ ವಿಜೇತರಿಗೆ ರೂ. 5 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

click me!