
ಇರಾಕ್, ಸಿರಿಯಾದಂತಹ ದೇಶಗಳಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಐಸಿಸ್ ಉಗ್ರರಿಗೆ ಭಾರತದಿಂದ ನೋವು ನಿವಾರಕ ಮಾತ್ರೆ ಪೂರೈಕೆಯಾಗುತ್ತಿರುವ ಕಳವಳಕಾರಿ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಲಿಬಿಯಾದಲ್ಲಿ ಹೋರಾಡುತ್ತಿರುವ ಐಸಿಸ್ ಉಗ್ರರಿಗೆ ಅಂತಲೇ ಸುಮಾರು 482 ಕೋಟಿ ರೂಪಾಯಿ ಮೌಲ್ಯದ 37 ಮಿಲಿಯನ್ ಟ್ರಮಡೋಲ್ ಮಾತ್ರೆಗಳನ್ನು ಭಾರತದಿಂದ ಸಾಗಿಸಲಾಗಿತ್ತು. ಮೂರು ಕಂಟೇನರ್ಗಳಲ್ಲಿ ಮಾತ್ರೆಗಳನ್ನು ಪ್ಯಾಕ್ ಮಾಡಿ ಕಂಟೇನರ್ಗೆ ಹೊದಿಕೆ ಮತ್ತು ಶಾಂಪೂ ಅನ್ನೋ ಲೇಬಲ್ ಅಂಟಿಸಲಾಗಿತ್ತು. ಲಿಬಿಯಾದ ಮಿಸ್ರಾಟಾ ಹಾಗೂ ತೊಬ್ರುಕ್ಗೆ ಸಾಗುತ್ತಿದ್ದ ಸರಕು ಸಾಗಣೆ ಹಡಗಿಗೆ ಇದನ್ನು ತುಂಬಲು ಉದ್ದೇಶಿಸಲಾಗಿತ್ತು. ಅಷ್ಟರಲ್ಲಿಯೇ ಇಟಲಿ ಪೊಲೀಸರು ಜಿನೋವಾ ಬಂದರಿನಲ್ಲಿ ದಾಳಿ ಮಾಡಿ ಪೇಯ್ನ್ ಕಿಲ್ಲರ್ ಮಾತ್ರೆಗಳನ್ನು ಜಪ್ತಿ ಮಾಡಿದ್ದಾರೆ.
ಟ್ರಮಡೋಲ್ ಮಾತ್ರೆ ಒಂದು ನೋವು ನಿವಾರಕ ಔಷಧ. ಈ ಮಾತ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇದನ್ನು ಬಳಸುತ್ತಾರೆ. ಈ ಮಾತ್ರೆ ಮಧ್ಯಮ ಅಥವಾ ತೀವ್ರ ತೆರನಾದ ನೋವು ನಿವಾರಕ ಗುಳಿಗೆಯಾಗಿದೆ. ಸದಾ ಸಂಘರ್ಷದಿಂದ ತೊಡಗಿ ಒಂದಿಲ್ಲೊಂದು ರೀತಿಯಲ್ಲಿ ಘಾಸಿಗೊಳ್ಳುವ ಐಸಿಸ್ ಉಗ್ರರು ಈ ಮಾತ್ರೆ ನಿತ್ಯ ಸೇವಿಸುತ್ತಾರೆ. ಈ ಮಾತ್ರೆಗೆ ಲಿಬಿಯಾ ಮತ್ತು ಸಿರಿಯಾದಲ್ಲಿ ಭಾರೀ ಬೇಡಿಕೆಯಿದೆ. ಹೀಗಾಗಿ ಕಡಿಮೆ ಬೆಲೆಗೆ ಭಾರತದಲ್ಲಿ ಸಿಗುವ ಟ್ರಮಡೋಲ್ ಮಾತ್ರೆ ಮೇಲೆ ISIS ಕಣ್ಣು ಬಿದ್ದಿದ್ದು, ಹಲವು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಂಡಿದೆ.
ಇಟಲಿ ಪೊಲೀಸರು ಜಪ್ತಿ ಮಾಡಿರುವ ಟ್ರಮಡೋಲ್ ಮಾತ್ರೆಯ ಮೂಲ ಭಾರತೀಯ ಔಷಧ ಕಂಪನಿಯದ್ದಾಗಿದೆ. ದುಬೈ ಮೂಲದ ಆಮದುದಾರನೊಬ್ಬ ಭಾರೀ ಪ್ರಮಾಣದಲ್ಲಿ ಮಾತ್ರೆಗಳನ್ನ ಖರೀದಿಸಿರೋದು ಅಂತ ತಿಳಿದು ಬಂದಿದೆ. ಟ್ಯಾಬ್ಲೆಟ್ ತುಂಬಿದ್ದ 3 ಕಂಟೇನರ್ಗಳು ಭಾರತದಿಂದ ಶ್ರೀಲಂಕಾಗೆ ಹಡಗಿನ ಮೂಲಕ ತಲುಪಿದ್ದವು.
ಜಿಹಾದ್ ಹೆಸರಲ್ಲಿ ISIS ಉಗ್ರರು ನಡೆಸುತ್ತಿರುವ ಹೋರಾಟಕ್ಕೆ ಹಲವರು ನೀರೆರೆದು ಪೋಷಿಸುತ್ತಿರೋದು ಸ್ಪಷ್ಟವಾಗಿದೆ. ಸದ್ಯ ಇಟಲಿ ಪೊಲೀಸರು ಮಾತ್ರೆಗಳನ್ನ ಜಪ್ತಿ ಮಾಡಿ ವಿಶ್ವಸಂಸ್ಥೆಗೆ ದೂರು ನೀಡಿ ತನಿಖೆ ಚುರುಕುಗೊಳಿಸಿದೆ.
(ಸಾಂಧರ್ಭಿಕ ಚಿತ್ರ)
ವರದಿ: ಜೆ. ಎಸ್. ಪೂಜಾರ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.