ಕೇಜ್ರಿ ಕೆಳಗಿಳಿಸಲು ಸಿದ್ದರಾದ 34 ಆಪ್ ಶಾಸಕರು ?

By Suvarna Web DeskFirst Published Apr 29, 2017, 6:09 PM IST
Highlights

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಪ್ ಸೋಲುಂಡರೆ, 34 ಶಾಸಕರು ಕೇಜ್ರಿವಾಲ್ ಅವರ ರಾಜೀನಾಮೆಗೆ ಆಗ್ರಹಿಸಲಿದ್ದಾರೆ ಎಂದು ವಾರದ ಆರಂಭದಲ್ಲಿ ಬಗ್ಗಾ ಟ್ವೀಟ್ ಮಾಡಿದ್ದರು. ಚುನಾವಣೆ ಲಿತಾಂಶ ಹೊರಬಿದ್ದ ಮೂರು ದಿನಗಳ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಅವರು, ಕುಮಾರ್ ವಿಶ್ವಾಸ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಬಯಕೆಯನ್ನು ಆಪ್‌ನ 34 ಶಾಸಕರು ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ ಎಂದಿದ್ದಾರೆ.

ನವದೆಹಲಿ(ಏ.29): ಅರವಿಂದ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಕುಮಾರ್ ವಿಶ್ವಾಸ್ ಅವರಿಗೆ ಪಟ್ಟ ಕಟ್ಟಲು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕರು ಬಯಕೆ ಹೊಂದಿದ್ದಾರೆ ಎಂದು ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಎಸ್. ಬಗ್ಗಾ ಶನಿವಾರ ಟ್ವೀಟ್ ಮಾಡಿರುವುದು ಸಂಚಲನಕ್ಕೆ ಕಾರಣವಾಗಿದೆ.

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಪ್ ಸೋಲುಂಡರೆ, 34 ಶಾಸಕರು ಕೇಜ್ರಿವಾಲ್ ಅವರ ರಾಜೀನಾಮೆಗೆ ಆಗ್ರಹಿಸಲಿದ್ದಾರೆ ಎಂದು ವಾರದ ಆರಂಭದಲ್ಲಿ ಬಗ್ಗಾ ಟ್ವೀಟ್ ಮಾಡಿದ್ದರು. ಚುನಾವಣೆ ಲಿತಾಂಶ ಹೊರಬಿದ್ದ ಮೂರು ದಿನಗಳ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಅವರು, ಕುಮಾರ್ ವಿಶ್ವಾಸ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಬಯಕೆಯನ್ನು ಆಪ್‌ನ 34 ಶಾಸಕರು ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ ಎಂದಿದ್ದಾರೆ.

ಈ ನಡುವೆ, ಟೀವಿ ಚಾನೆಲ್ಲೊಂದರ ಜತೆ ಮಾತನಾಡಿರುವ ಕುಮಾರ್ ವಿಶ್ವಾಸ್, ‘ನಮ್ಮ ಬಗ್ಗೆ ಜನರಲ್ಲಿ ಅಪನಂಬಿಕೆ ಇದೆ. ಹೀಗಾಗಿ ಚುನಾವಣೆ ಸೋಲಿಗೆ ಮತಯಂತ್ರವನ್ನು ದೂಷಿಸುವುದು ತಪ್ಪು. ನಾಯಕತ್ವ ಬದಲಾವಣೆ ಕುರಿತು ನಿರ್ಧಾರ ಕೈಗೊಳ್ಳಲು ಪಕ್ಷ ಮುಕ್ತವಾಗಿದೆ’ ಎಂದಿದ್ದಾರೆ.

ಸಿಸೋಡಿಯಾ ಟ್ವೀಟರ್ ಹ್ಯಾಕ್:

ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ‘ನನ್ನ ಟ್ವೀಟರ್ ಖಾತೆ ಹ್ಯಾಕ್ ಆಗಿದೆ. ಯಾರೋ ಹ್ಯಾಕ್ ಮಾಡಿ ಅಣ್ಣಾ ಹಜಾರೆ ವಿರೋ ಸಂದೇಶ ಹಾಕುತ್ತಿದ್ದಾರೆ’ ಎಂದು ದೂರಿದ್ದಾರೆ.

click me!