ಎಂಇಪಿ ಸಂಸ್ಥಾಪಕಿ ನೌಹೆರಾ ಶೇಖ್ ರನ್ನು ಬಳ್ಳಾರಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. 3 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಹೈದ್ರಾಬಾದ್ ಪೊಲೀಸರ ವಶದಲ್ಲಿದ್ದ ಶೇಖ್ ರನ್ನು ಗೌಪ್ಯವಾಗಿ ಕರ್ನಾಟಕಕ್ಕೆ ಕರೆತರಲಾಗಿದೆ.
ಬಳ್ಳಾರಿ [ಜು.11]: MEP ಸಂಸ್ಥಾಪಕಿ ಹಾಗೂ ಹೀರಾ ಗೋಲ್ಡ್ ಕಂಪನಿ ನಿರ್ದೇಶಕಿ ನೌಹೆರಾ ಶೇಖ್ ರನ್ನು ಬಳ್ಳಾರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
3 ಸಾವಿರ ಕೋಟಿ ರು. ವಂಚನೆ ಪ್ರಕರಣದಲ್ಲಿ ಹೈದ್ರಾಬಾದ್ ಚಂಚಲಗೂಡು ಜೈಲಿನಲ್ಲಿದ್ದ ನೌಹೆರಾ ಶೇಖ್ ರನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
24ಕಡೆಗಳಲ್ಲಿ ಬೇನಾಮಿ ಆಸ್ತಿ, 182 ಬ್ಯಾಂಕ್ ಖಾತೆ ಹೊಂದಿದ್ದ, 1,72,114 ಹೂಡಿಕೆದಾರರಿಂದ ಮೂರು ಸಾವಿರ ಕೋಟಿ ರು. ಹಣ ಅಕ್ರಮವಾಗಿ ಸಂಗ್ರಹಿಸಿದ ಆರೋಪದ ಅಡಿಯಲ್ಲಿ ನೌಹೆರಾ ಬಂಧನವಾಗಿತ್ತು.
ಬಳ್ಳಾರಿಯ ಹೊಸಪೇಟೆ ನಗರ ಠಾಣೆಯಲ್ಲಿ ನೌಹೆರಾ ಶೇಖ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಈ ನಿಟ್ಟಿನಲ್ಲಿ ಬಳ್ಳಾರಿ ಪೊಲೀಸರು ಹೈದ್ರಾಬಾದ್ ಜೈಲಿನಿಂದ ವಶಕ್ಕೆ ಪಡೆದು ಗೌಪ್ಯವಾಗಿ ಕರೆತಂದಿದ್ದಾರೆ.