ಸರ್ಕಾರದ ಮುಂದಿನ ನಡೆ ಸ್ಪಷ್ಟಪಡಿಸಿದ ಟ್ರಬಲ್ ಶೂಟರ್ ಡಿಕೆಶಿ

Published : Jul 11, 2019, 11:11 AM IST
ಸರ್ಕಾರದ ಮುಂದಿನ ನಡೆ ಸ್ಪಷ್ಟಪಡಿಸಿದ ಟ್ರಬಲ್ ಶೂಟರ್ ಡಿಕೆಶಿ

ಸಾರಾಂಶ

ಸರ್ಕಾರದ ಮುಂದಿನ ನಡೆ ಬಗ್ಗೆ ಸಚಿವ ಡಿಕೆ ಶಿವಕುಮಾರ್ ತಮ್ಮ ಸ್ಪಷ್ಟ ನಿಲುವು ತಿಳಿಸಿದ್ದಾರೆ. ಸಿಎಂ ರಾಜೀನಾಮೆ ವಿಚಾರವಾಗಿಯೂ ಪ್ರತಿಕ್ರಿಯಿಸಿ, ಸರ್ಕಾರ ಮುಂದುವರಿಯಲಿದೆಯಾ, ಪತನವಾಗಲಿದೆಯಾ ಎನ್ನುವು ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

ಬೆಂಗಳೂರು [ಜು.11] :  ರಾಜ್ಯ ರಾಜಕೀಯದಲ್ಲಿ  ಹೈ ಡ್ರಾಮಾ ನಡೆಯುತ್ತಿದ್ದು, ಶಾಸಕರು ಸಚಿವರ ರಾಜೀನಾಮೆ ಬಳಿಕ ಇದೀಗ ಸಿಎಂ ರಾಜೀನಾಮೆ ವಿಚಾರ ಚರ್ಚೆಯಾಗುತ್ತಿದೆ. ದಿನದಿನಕ್ಕೂ ಕೂಡ ಹೊಸ ತಿರುವುಗಳೋಂದಿಗೆ ರಾಜಕಾರಣ ಸಾಗುತ್ತಿದೆ. 

ಆದರೆ ಸಿಎಂ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿಎಂ ರಾಜೀನಾಮೆ ನೀಡುವಂತಹ ಸ್ಥಿತಿ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕರ್ನಾಟಕ ರಾಜಕೀಯ ಪ್ರಹಸನದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

2008 -09ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನಾಗಿತ್ತು. ಆಗಲೂ ಕೂಡ 18 ಮಂದಿ ಬಂಡಾಯ ಎದ್ದಿದ್ದರು. ಆಗ ಯಡಿಯೂರಪ್ಪ ಏನು ಮಾಡಿದರು ಎಂದು ಪ್ರಶ್ನೆ ಮಾಡಿದ್ದಾರೆ. 

ಅಂದು 16 ಮಂದಿಯನ್ನು ಅನರ್ಹಗೊಳಿಸಿ ಬಿಜೆಪಿ ಸರ್ಕಾರ ಮುಂದುವರಿಸಿತ್ತು. ಹಾಗೆ ಅದೇ ಕಾನೂನು, ಅದೇ ಸ್ಪೀಕರ್ ನಿರ್ಣಯ ಈಗಲೂ ಅನ್ವಯಿಸುದಿಲ್ಲವೇ ಎಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ರಾಜೀನಾಮೆ ವಿಚಾರವನ್ನು ತಳ್ಳಿ ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ: 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ
ಎದುರುಮನೆ ಹುಡುಗಿಯೊಂದಿಗೆ ಓಡಿಹೋದ ಮಗ; ತಾಯಿಗೆ ಮನಬಂದಂತೆ ಥಳಿಸಿದ ಲೋಕಲ್ ಪೊಲೀಸ್!