
ತುಮಕೂರು (ಜ.17): ಅಂತರಾಜ್ಯ ವೇಶ್ಯಾವಾಟಿಕೆ ಜಾಲಕ್ಕೆ ಯುವತಿಯರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಬಂಧಿಸಲಾಗಿದೆ.
ತುಮಕೂರು ಜಿಲ್ಲೆ ಹಾಗೂ ಕೊರಟಗೆರೆ ತಾಲೂಕಿನಿಂದ ದೆಹಲಿಗೆ ಯುವತಿಯರನ್ನು ಕಳ್ಳ ಸಾಗಣೆ ನಡೆಸುತ್ತಿದ್ದರು ಎಂದು ಕೊರಟಗೆರೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕೊರಟಗೆರೆ ಉಪನಿರೀಕ್ಷಕ ಪೊಲೀಸರ ತಂಡವು ಮೂವರು ಮಹಿಳೆಯರನ್ನು ಬಂಧಿಸಿದೆ. ಕೊರಟಗೆರೆ ಪಟ್ಟಣದ ಹನುಮಂತಪುರದ ಗೌಡನಕೆರೆಯ ಭಾಗ್ಯಮ್ಮ, ಮಧುಗಿರಿಯ ಗರಣಿ ಹೊಸಕೋಟೆಯ ಭಾಗ್ಯಮ್ಮ, ನೂರ್ ಜಾನ್ ಎಂಬ ಮೂವರ ಬಂಧನವಾಗಿದೆ.
ಇಲ್ಲಿನ ಸುತ್ತಮುತ್ತಲ ಪ್ರದೇಶಗಳಿಂದ ಯುವತಿಯರನ್ನು ದೆಹಲಿಗೆ ಕಳ್ಳಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ವಂಚಿಸಿ ಕರೆದೊಯ್ದು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡುತ್ತಿದ್ದರು. ಓರ್ವ ಯುವತಿಗೆ 3 ರಿಂದ 8 ಸಾವಿರದವರೆಗೂ ಕೂಡ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.