ಮೂರು ದಿನಗಳ ಧರ್ಮ ಸಂಸದ್'ಗೆ ಇಂದು ತೆರೆ

Published : Nov 26, 2017, 08:57 AM ISTUpdated : Apr 11, 2018, 01:10 PM IST
ಮೂರು ದಿನಗಳ ಧರ್ಮ ಸಂಸದ್'ಗೆ ಇಂದು ತೆರೆ

ಸಾರಾಂಶ

ಮೂರು ದಿನಗಳ ಧರ್ಮ ಸಂಸದ್'ಗೆ ಉಡುಪಿಯಲ್ಲಿಂದು ತೆರೆ ಬೀಳಲಿದೆ. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ದ ಎಂಬ ಹಕ್ಕೋತ್ತಾಯದ ನಿರ್ಣಯ ಇಂದು ಹೊರಬೀಳಲಿದೆ. ಸಂಜೆ ನಡೆಯಲಿರುವ ವಿರಾಟ್ ಹಿಂದೂ ಸಮಾವೇಷದ ಮೂಲಕ ಧರ್ಮ ಸಂಸದ್ ಅಂತ್ಯವಾಗಲಿದೆ.

ಉಡುಪಿ (ನ.26): ಮೂರು ದಿನಗಳ ಧರ್ಮ ಸಂಸದ್'ಗೆ ಉಡುಪಿಯಲ್ಲಿಂದು ತೆರೆ ಬೀಳಲಿದೆ. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ದ ಎಂಬ ಹಕ್ಕೋತ್ತಾಯದ ನಿರ್ಣಯ ಇಂದು ಹೊರಬೀಳಲಿದೆ. ಸಂಜೆ ನಡೆಯಲಿರುವ ವಿರಾಟ್ ಹಿಂದೂ ಸಮಾವೇಷದ ಮೂಲಕ ಧರ್ಮ ಸಂಸದ್ ಅಂತ್ಯವಾಗಲಿದೆ.

ರಾಮಮಂದಿರ ನಿರ್ಮಾಣ ವಿಚಾರ ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಒಂದು ವರ್ಷದೊಳಗೆ ಮಂದಿರ ನಿರ್ಮಾಣಕ್ಕೆ ಪಣ ತೆಗೆದುಕೊಂಡು, ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಇನ್ನು ಹಿಂದೂ ಧರ್ಮಕ್ಕೆ ಕಳಂಕವಾಗಿರುವ ಅಸ್ಪೃಷ್ಯತೆ, ಮತಾಂತರ ತಡೆ, ಘರ್ ವಾಪಸಿ, ಗೋ ಹತ್ಯೆ ನಿಷೇಧ ಕಾನೂನಿನ ಹಕ್ಕೊತ್ತಾಯ ಕೂಡ ಧರ್ಮ ಸಂಸದ್ ನಿರ್ಣಯಗಳಲ್ಲಿ ಸೇರಲಿದೆ.

ಇಂದು ಬೆಳಗ್ಗೆ 10 ಗಂಟೆಗೆ ಧರ್ಮ ಸಂಸದ್ ನಲ್ಲಿ ವಿವಿಧ ಸಮಾಜದ ಮುಖಂಡರ ಸಭೆ ನಡೆಯುತ್ತದೆ.  ಮಧ್ಯಾಹ್ನ 2.30ಕ್ಕೆ ಶೋಭಾ ಯಾತ್ರೆಯ ಮೂಲಕ ಎಂ ಜಿ ಎಂ ಮೈದಾನಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 4 ಗಂಟೆಗೆ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದ್ದು,  ಪೇಜಾವರ ಶ್ರೀಗಳು ಮತ್ತು ವೀರೇಂದ್ರ ಹೆಗ್ಗಡೆಯವರು ಪ್ರಮುಖ ಭಾಷಣ ಮಾಡಲಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗುವ ಬಗ್ಗೆ ಇನ್ನೂ ಖಚಿತವಾಗಿಲ್ಲ.

ಆರ್'ಎಸ್'ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಮತ್ತು ಪ್ರವೀಣ್ ತೊಗಾಡಿಯಾ ಕೂಡ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಭಾಗಿಯಾಗಲಿದ್ದಾರೆ.  ಧರ್ಮ ಸಂಸದ್'ನಲ್ಲಿ ಮಧ್ಯಸ್ಥಿಕೆ ವಹಿಸಲು ವಿರೋಧ ವ್ಯಕ್ತವಾಗಿದ್ದರಿಂದ ರವಿಶಂಕರ್ ಗುರೂಜಿ ಗೈರು ಹಾಜರಾಗುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರಾವಳಿಯ ಕನಸಿನ ರೈಲು ವಂದೇ ಭಾರತ್ ಸಂಚಾರ ಜೂನ್‌ನಿಂದ ಅಧಿಕೃತ ಆರಂಭ: ಸಚಿವ ವಿ ಸೋಮಣ್ಣ
Cockroach Janata Party ಅಸಲಿ ಮುಖ ಬಯಲು?: ಪ್ರಧಾನಿ ಮೋದಿ ವಿರುದ್ಧ ಸಂಚಿಗೆ ಗಡಿಯಾಚೆ ಪ್ಲಾನ್? ರಾಜೀವ್ ಚಂದ್ರಶೇಖರ್ ಸ್ಫೋಟಕ ಹೇಳಿಕೆ!