2ಜಿ ಹಗರಣ: ರಾಜಾ, ಕನಿಮೋಳಿ ಸೇರಿ ಎಲ್ಲ ಆರೋಪಿಗಳೂ ಖುಲಾಸೆ; ಏನಿದು 2ಜಿ ಹಗರಣ ಗೊತ್ತಾ..?

By Suvarna Web DeskFirst Published Dec 21, 2017, 11:00 AM IST
Highlights

ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದ ಬಹುಕೋಟಿ 2ಜಿ ಹಗರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಿದೆ. ಕೇಂದ್ರದ ಮಾಜಿ ಸಚಿವ ಎ. ರಾಜಾ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕೆ ಕರುಣಾನಿಧಿ ಪುತ್ರಿ ಕನಿಮೋಳಿ ಹಾಗೂ ದೇಶದ ಕಾರ್ಪೋರೆಟ್ ಕ್ಷೇತ್ರದ ಹಲವು ದಿಗ್ಗಜರ ಭವಿಷ್ಯ ಈ ತೀರ್ಪಿನಲ್ಲಿ ಅಡಗಿತ್ತು.

ಹೊಸದಿಲ್ಲಿ: ಬಹು ನಿರೀಕ್ಷಿತ 2ಜಿ ಪ್ರಕರಣದ ತೀರ್ಪು ಹೊರಬಂದಿದ್ದು, ಪ್ರಮುಖ ಆರೋಪಿಗಳಾದ ಕನಿಮೋಳಿ ಹಾಗೂ ಎ ರಾಜಾ ಸೇರಿ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದ ಬಹುಕೋಟಿ 2ಜಿ ಹಗರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ಕೇಂದ್ರದ ಮಾಜಿ ಸಚಿವ ಎ. ರಾಜಾ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಪುತ್ರಿ ಕನಿಮೋಳಿ ಹಾಗೂ ದೇಶದ ಕಾರ್ಪೋರೇಟ್ ಕ್ಷೇತ್ರದ ಹಲವು ದಿಗ್ಗಜರು ಈ ಪ್ರಕರಣದ ಆರೋಪಿಗಳಾಗಿದ್ದರು.

2ಜಿ ದೂರಸಂಪರ್ಕ ಸ್ಪೆಕ್ಟ್ರಂಗಳ ಹರಾಜಿಗೆ ಸಂಬಂಧಿಸಿದ ಹಗರಣ ಇದಾಗಿದ್ದು, 2008ರಲ್ಲಿ ನಡೆದಿತ್ತು. ಇದೊಂದು 1.76 ಲಕ್ಷ ಕೋಟಿ ರೂ. ಮೊತ್ತದ ಅಕ್ರಮವೆಂದು ಮಹಾಲೇಖಪಾಲರು ವರದಿ ನೀಡಿದ್ದರು.

Delhi: Kanimozhi, daughter of DMK chief M Karunanidhi & Rajya Sabha MP, arrives at Patiala House Court for pic.twitter.com/MgwaGwO3ba

— ANI (@ANI)

The Court said that the prosecution has miserably failed to prove any of its charge. Thus all accused are acquitted: Vijay Aggarwal, Lawyer of Swan Telecom promoters Shahid Usman Balwa, Vinod Goenka and others pic.twitter.com/MgWCLKApNE

— ANI (@ANI)

2ಜಿ ಹಗರಣದ ಸುತ್ತ-ಮುತ್ತ ಒಂದು ಅವಲೋಕನ...

ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದ ಬಹುಕೋಟಿ 2ಜಿ ಹಗರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಿದೆ. ಕೇಂದ್ರದ ಮಾಜಿ ಸಚಿವ ಎ. ರಾಜಾ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕೆ ಕರುಣಾನಿಧಿ ಪುತ್ರಿ ಕನಿಮೋಳಿ, ದೇಶದ ಕಾರ್ಪೋರೆಟ್ ಕ್ಷೇತ್ರದ ಹಲವು ದಿಗ್ಗಜರ ಭವಿಷ್ಯ ಈ ತೀರ್ಪು ಅಡಗಿತ್ತು. ಈ ಹಿನ್ನೆಲೆಯಲ್ಲಿ 2ಜಿ ಹಗರಣ ಕುರಿತ ಮಾಹಿತಿ ಇಲ್ಲಿದೆ.

122 ಕಂಪನಿಗಳ ಪರವಾನಗಿ ರದ್ದು:

ಫೆ.20ರ 2012ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ 2008ರಲ್ಲಿ ಪರವಾನಿ ಪಡೆದಿದ್ದ 122 ಕಂಪನಿಗಳ ಲೈಸನ್ಸನ್ನು ರದ್ದುಗೊಳಿಸಿತ್ತು. ಯೂನಿಟೆಕ್ ವೈರ್‌'ಲೆಸ್, ಟಾಟಾ ಟೆಲಿ ಸರ್ವಿಸಸ್,ಲೂಪ್ ಟೆಲಿಕಾಂ, ಎಸ್‌ಎಲ್'ಟೆಲ್ ಅಲಿಯನ್ಸ್ ಇನ್ಫಾಟೆಕ್ ಮತ್ತು ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವಿಸಸ್ ಲಿಮಿಟೆಡ್‌'ಗಳಿಗೆ 5 ಕೋಟಿ ದಂಡ ವಿಧಿಸಿತ್ತು.

7 ಟ್ರಕ್‌ಗಳಲ್ಲಿ ಚಾರ್ಜ್ ಶೀಟ್!

ಮಹಾಲೇಕಪಾಲಕರು ನೀಡಿದ ವರದಿಗಳ ಪ್ರಕಾರ ಈ ಹಗರಣದಿಂದ ಭಾರತವು 1.76 ಲಕ್ಷ ಕೋಟಿ ರು. ನಷ್ಟಕ್ಕೆ ಒಳಗಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಸಿಬಿಐ, ನ್ಯಾಯಾಲಯಕ್ಕೆ 80,000 ಪುಟಗಳ ಚಾರ್ಜ್‌ಶೀಟ್‌'ನ್ನು ಸಲ್ಲಿಸಿದೆ. 2011ರಲ್ಲಿ ಇದನ್ನು ಕೋರ್ಟ್‌ಗೆ ಹಾಜರು ಪಡಿಸುವಾಗ 7 ಟ್ರಕ್‌'ಗಳಲ್ಲಿ ಕೊಂಡೊಯ್ಯಲಾಗಿತ್ತು.

ಏನಿದು 2ಜಿ ಹಗರಣ..?

2ಜಿ ಹಗರಣವು ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ದೇಶದ ಅತಿದೊಡ್ಡ ಹಗರಣಗಳಲ್ಲೊಂದು. 2007ರಲ್ಲಿ ಕೇಂದ್ರ ಸರ್ಕಾರವು ಮೊಬೈಲ್ ಟೆಲಿಫೋನ್ ಕಂಪನಿಗಳಿಗೆ ತರಂಗಾಂತರಗಳ ಹಂಚಿಕೆ ಪರವಾನಗಿ ನೀಡುವಾಗ ಪಾರದರ್ಶಕವಾಗಿ ಹರಾಜು ಹಾಕಿ ಪರವಾನಗಿ ನೀಡದೆ ಅಕ್ರಮ ಎಸಗಿದೆ. ಕೆಲ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ಅಕ್ರಮವಾಗಿ ಪರವಾನಗಿ ನೀಡಿದ್ದಾರೆ ಎಂದು 2010 ನವೆಂಬರ್ 16ರಂದು ವಿನೋದ್ ರೈ ನೇತೃತ್ವದ ಸಿಎಜಿ, ಟೆಲಿಕಾಂ ಆಪರೇಟರ್‌'ಗಳಿಂದ 1.76 ಲಕ್ಷ ಕೋಟಿ ರು. ಪಡೆದು 2ಜಿ ಲೈಸೆನ್ಸ್ ವಿತರಿಸಿದೆ ಎಂದು ಬಹಿರಂಗ ಪಡಿಸಿತ್ತು. ಅಲ್ಲದೆ ಅನರ್ಹರಿಗೆ ಪರವಾನಗಿಯನ್ನು ನೀಡಲಾಗಿದೆ ಅರ್ಜಿ ಸಲ್ಲಿಸಿದ ಕಂಪನಿಗಳು ಅಪೂರ್ಣ ಮಾಹಿತಿ ಮತ್ತು ಕಾಲ್ಪನಿಕ ದಾಖಲೆಗಳನ್ನು ಸಲ್ಲಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಅಲ್ಲದೆ ಪರವಾನಗಿ ಪಡೆದ ಕಂಪನಿಗಳು ಅಲ್ಪಾವಧಿಯಲ್ಲಿಯೇ ಪರವಾನಗಿಯನ್ನು ಪ್ರೀಮಿಯರ್ ಇಂಡಿಯನ್ ಮತ್ತು ವಿದೇಶಿ ಕಂಪನಿಗಳಿಗೆ ಮಾರಾಟ ಮಾಡಿವೆ ಎಂದು ಸಿಎಜಿ ವರದಿ ತಿಳಿಸಿತ್ತು.

ಯುಪಿಎ ಅವಧಿಯಲ್ಲಿ ಮಾಹಿತಿ ಮತ್ತು ಸಂವಹನ ಸಚಿವರಾಗಿದ್ದ ಎ. ರಾಜಾ ಈ ಹಗರಣದ ಪ್ರಮುಖ ಆರೋಪಿ ಎಂದು ತನಿಖಾ ಸಂಸ್ಥೆಗಳು ಹೇಳಲಾಗಿತ್ತು. ಇದಕ್ಕೆ ಕಾರಣ, 2008ರಲ್ಲಿ 2ಜಿ ತಂರಂಗಾಂತರಗಳ ಲೈಸೆನ್ಸ್‌'ನ್ನು ಟೆಲಿಕಾಂ ಕಂಪನಿಗಳಿಗೆ ವಿತರಿಸುವಾಗ 2001ರಲ್ಲಿ ಇದ್ದಂತಹ ಬೆಲೆಗೆ ವಿತರಿಸಲಾಗಿದೆ. (2001ರಲ್ಲಿ ತರಂಗಾತರ ಲೈಸೆನ್ಸ್'ಗೆ 4 ಮಿ. ದರವಿತ್ತು, ಇದರನ್ವಯ 2008ರಲ್ಲಿ 350 ಮಿ.ಗೆ ತಂರಂಗಾಂತರ ಹಂಚಬೇಕಿತ್ತು. ಆದರೆ, ಕೇವಲ 4ಮಿ.ಗೆ ಹಂಚಲಾಗಿದೆ)

ಪ್ರಕರಣದ ಪ್ರಮುಖ ಆರೋಪಿಗಳು:

* ಎ ರಾಜಾ

ಅ.2007ರಿಂದ ಸೆ.25, 2007ರವರೆಗೆ ಸ್ಪೆಕ್ಟ್ರಂಗಾಗಿ ಅರ್ಜಿಸಲ್ಲಿಸುವ ದಿನಾಂಕವನ್ನು ಮುಂದೂಡುವಂತೆ 3000 ಕೋಟಿ.ರು ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ತನ್ನ ಪತ್ನಿ ಹೆಸರಲ್ಲಿ ಬ್ಯಾಂಕ್ ಅಕೌಂಟ್‌'ಗಳನ್ನು ತೆರೆದು ಅಕ್ರಮವಾಗಿ ಹಣ ಇಟ್ಟಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಿ ತಿಹಾರ್ ಜೈಲಿಗೆ ಹಾಕಲಾಗಿತ್ತು.

* ಕನಿಮೋಳಿ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮಗಳಾದ ಕನಿಮೋಳಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕಲೈನರ್ ಟಿವಿಯಲ್ಲಿ ಶೇ.20ರಷ್ಟು ಶೇರನ್ನು ಹೊಂದಿದ್ದಾರೆ. ಡಿಬಿ ರಿಯಾಲಿಟಿ ಪ್ರವರ್ತಕ ಶಾಹಿದ್ ಬಲ್ವಾ ಮತ್ತು ಎ. ರಾಜಾ ‘ಕಲೈನರ್’ ಟಿವಿಗೆ 200 ಕೋಟಿ ರು. ನೀಡಿದ್ದಾರೆ. ಕನಿಮೋಳಿ ಅವರು ಚಾನೆಲ್‌'ನ ಕಾರ್ಯಾಚರಣೆಯ ಹಿಂದೆ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ ಎಂದು ಕನಿಮೋಳಿಯವರನ್ನು ತಿಹಾರ್ ಜೈಲಿನಲ್ಲಿ 188 ದಿನಗಳ ಕಾಲ ಬಂಧಿಸಲಾಗಿತ್ತು.

* ಸಿದ್ದಾರ್ಥ್ ಬೆಹುರಾ

ಟೆಲಿಕಾಂ ಕಾರ್ಯದರ್ಶಿ ಬೆಹುರಾ ಅವರು ಎ ರಾಜಾ ಮತ್ತಿತರ ಆರೋಪಿಗಳ ಜತೆಗೂಡಿ ಸಂಚು ರೂಪಿಸಿದ್ದಾರೆ ಎಂಬ ಆರೋಪವಿತ್ತು. ಅಪ್ಲಿಕೇಶನ್‌ಗಳನ್ನು ನೀಡುವ ಗಡುವು ಸಮಯ 4.30- 5.30ರ ವರೆಗೆ ಘೋಷಿಸಲ್ಪಟ್ಟಾಗ ಬೆಹುರಾ, ಇತರ ಟೆಲಿಕಾಂ ಕಂಪನಿಗಳನ್ನು ನಿರ್ಬಂಧಿಸಲು ಕೌಂಟರ್‌'ಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಸುಮಾರು ಒಂದು ವರ್ಷ ಕಾಲ ಜೈಲಿನಲ್ಲಿದ್ದರು.

ಆರ್.ಕೆ. ಚಂಡೋಲಿಯಾ

ಎ.ರಾಜಾ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದ ಚಂಡೋಲಿಯಾ, ಸಿದ್ದಾರ್ಥ್ ಬೆಹುರಾ ಅವರೊಂದಿಗೆ ಪರವಾನಗಿಗಾಗಿ ಅರ್ಜಿಸಲ್ಲಿಸುವ ಕೌಂಟರ್‌'ಗಳನ್ನು ಮುಚ್ಚಲು ಸಂಚು ರೂಪಿಸಿದರು ಎಂಬ ಆರೋಪವಿತ. ಇವರನ್ನೂ ಕೂಡಾ ಬಂಧಿಸಲಾಗಿತ್ತು.

* ಇತರ ಆರೋಪಿಗಳು

ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ, ಉದ್ಯಮಿಗಳಾದ ಶಾಹೀದ್ ಬಲ್ವಾ, ಅನಿಲ್ ಅಂಬಾನಿ ಒಡೆತನ ರಿಲಯನ್ಸ್ ಗ್ರೂಪ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಷಿ, ಯುನಿಟೆಕ್ ಕಂಪನಿಯ ಮಾಜಿ ಮುಖ್ಯಸ್ಥ ಸಂಜಯ್ ಚಂದ್ರಾ ಮತ್ತಿತರರು.

 

click me!