ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿಗೆ ತಮ್ಮ ಅಭಿಪ್ರಾಯ ತಿಳಿಸಲು ಹೆಚ್ಚು ಕಾಲಾವಕಾಶ ಕೋರಿದ ಸಂಸ್ಥೆಗಳು ಹಾಗೂ ಪಿರ್ಯಾದುದಾರರ ವಿರುದ್ಧ ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನವದೆಹಲಿ[ಫೆ.08]: 2ಜಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿಗೆ ತಮ್ಮ ಅಭಿಪ್ರಾಯ ತಿಳಿಸಲು ಹೆಚ್ಚು ಕಾಲಾವಕಾಶ ಕೋರಿದ ಸಂಸ್ಥೆಗಳು ಹಾಗೂ ಪಿರ್ಯಾದುದಾರರ ವಿರುದ್ಧ ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಇದಕ್ಕಾಗಿ ದಂಡದ ರೂಪದಲ್ಲಿ 16000 ಗಿಡಗಳನ್ನು ನೆಡುವಂತೆ ಆದೇಶಿಸಿದೆ.
ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ನ್ಯಾ. ನಜ್ಮಿ ವಜೀರಿ ಅವರು, 2ಜಿ ಹಗರಣದಿಂದ ಖುಲಾಸೆಯಾಗಿದ್ದನ್ನು ಪ್ರಶ್ನಿಸಿ ಇ.ಡಿ ಮತ್ತು ಸಿಬಿಐ ಸಲ್ಲಿಸಿದ ಅರ್ಜಿಗಳಿಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶ ಕೋರಿದ ಮಾಜಿ ಸಚಿವ ಎ. ರಾಜಾ, ಡಿಎಂಕೆ ನಾಯಕಿ ಕನಿಮೋಳಿ ಸೇರಿ ಇತರ ಉದ್ಯಮಿಗಳಿಗೆ ದಕ್ಷಿಣ ದೆಹಲಿಯ ರಿಡ್ಜ್ ಅರಣ್ಯ ಪ್ರದೇಶದಲ್ಲಿ 16000 ಗಿಡ ನೆಡುವ ದಂಡ ವಿಧಿಸಿದ್ದಾರೆ.