
ಬೆಂಗಳೂರು(ನ.27): ಮುಂಬೈ ಭಯೋತ್ಪಾದಕ ದಾಳಿಗೆ 10 ವರ್ಷ ಸಂದಿದೆ. ಈ ಮಧ್ಯೆ ಇಡೀ ದೇಶ ದಾಳಿಯಲ್ಲಿ ಹುತಾತ್ಮರಾದ ಪೊಲೀಸರು ಮತ್ತು ಸೈನಿಕರನ್ನು ನೆನೆದು ಗದ್ಗದಿತವಾಗಿದೆ.
ದೇಶ ರಕ್ಷಣೆಯಲ್ಲಿ ಹುತಾತ್ಮರಾದ ಭದ್ರತಾಪಡೆಗಳ ಕುಟುಂಬಸ್ಥರ ನೆರವಿಗಾಗಿ ಸಂಸದ ರಾಜೀವ್ ಚಂದ್ರಶೇಖರ್ 'ಫ್ಲ್ಯಾಗ್ಸ್ ಆಫ್ ಆನರ್' ಎಂಬ ಸಂಸ್ಥೆ ಪ್ರಾರಂಭಿಸಿದ್ದು, ಮುಂಬೈ ದಾಳಿಯಲ್ಲಿ ಹುತಾತ್ಮರಾದ ಪೊಲೀಸರು ಮತ್ತು ಸೈನಿಕರ ಕುಟುಂಬಸ್ಥರಿಗೆ ಈ ಸಂಸ್ಥೆ ವತಿಯಿಂದ ನೆರವು ನೀಡಲಾಯಿತು.
ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬಸ್ಥರಿಗೆ ಈ ವೇಳೆ ಸಂಸದ ರಾಜೀವ್ ಚಂದ್ರಶೇಖರ್ ಫ್ಲ್ಯಾಗ್ಸ್ ಆಫ್ ಆನರ್ ಸಂಸ್ಥೆ ವತಿಯಿಂದ 25 ಲಕ್ಷ ರೂ. ಆರ್ಥಿಕ ಸಹಾಯ ಮಾಡಿದರು.
ಇನ್ನು ಫ್ಯಾಗ್ಸ್ ಆಫ್ ಆನರ್ ಸಂಸ್ಥೆ ವತಿಯಿಂದ ನೀಡಲಾಗಿರುವ ಆರ್ಥಿಕ ಸಹಾಯದಲ್ಲಿ, ದೇಶಕ್ಕಾಗಿ ಹುತಾತ್ಮರಾದ ವೀರ ಸೈನಿಕರ ಕುಟುಂಬಸ್ಥರ ನೆರವಿಗಾಗಿ ಬರುವ ವಾಗ್ದಾನವನ್ನು ಸಂದೀಪ್ ಉನ್ನಿ ಕೃಷ್ಣನ್ ಕುಟುಂಬ ಮಾಡಿದೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ರಾಜೀವ್ ಚಂದ್ರಶೇಖರ್, ಮುಂಬೈ ದಾಳಿಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗಿದಾಗ ಸರ್ಕಾರದ ಹೇಗೆ ಸನ್ನದ್ಧವಾಗಲಿದೆ ಎಂಬ ಕುರಿತು ರಾಜೀವ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ನು ಫ್ಲ್ಯಾಗ್ಸ್ ಆಫ್ ಆನರ್ ಸಂಸ್ಥೆಯಡಿಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದು, ಈ ಕಾರ್ಯ ಮುಂದುವರೆಯಲಿ ಎಂದು ಹಾರೈಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.