ಹೊಸ ರೂಲ್ಸ್ : ಕರೆಂಟ್ ಕಟ್ ಮಾಡಿದರೆ ವಿದ್ಯುತ್ ಕಂಪನಿಗಳು ಗ್ರಾಹಕರಿಗೆ ದಂಡ ಕಟ್ಟಿಕೊಡಬೇಕು

By Suvarna Web DeskFirst Published Dec 8, 2017, 6:14 PM IST
Highlights

, ನೂತನ ನಿಯಮವು ಏಪ್ರಿಲ್ 1, 2019ರ ಆರ್ಥಿಕ ವರ್ಷದಲ್ಲಿ ಜಾರಿಗೆ ಬರಲಿದ್ದು, ನಮ್ಮ ಉದ್ದೇಶ ಮಾರ್ಚ್ 2019ರೊಳಗೆ 24/7 ವಿದ್ಯುತ್ ಒದಗಿಸುವುದು

ನವದೆಹಲಿ(ಡಿ.08): ಇನ್ನು ಮುಂದೆ ವಿದ್ಯುತ್ ಕಂಪನಿಗಳು ಅನಾವಶ್ಯಕವಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವಂತಿಲ್ಲ. ಒಂದು ವೇಳೆ ಉದ್ದೇಶ ಪೂರ್ವಕವಾಗಿ ಅಥವಾ ಬೇಕಾಬಿಟ್ಟಿ ಕರೆಂಟ್ ಕಟ್ ಮಾಡಿದರೆ ಗ್ರಾಹಕರಿಗೆ ದಂಡ ಕಟ್ಟಿಕೊಡಬೇಕು. ಇದು ಕೇಂದ್ರದಿಂದ ಜಾರಿಗೊಳ್ಳುವ ನೂತನ ಕಾನೂನು.

2019ರ ಏಪ್ರಿಲ್'ನೊಳಗೆ  ಅನ್ಯಥಾ ವಿದ್ಯುತ್ ಸಂಪರ್ಕ ಕಡಿತವನ್ನು ಕಡಿಮೆಗೊಳಿಸುವುದು ಹಾಗೂ ಕಳವನ್ನು ನಿಯಂತ್ರಿಸುವುದಕ್ಕಾಗಿ ಪ್ರಿಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್'ಗಳನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಈ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಕೇಂದ್ರ ವಿದ್ಯುತ್ ಹಾಗೂ ನೂತನ ನವೀಕರಿಸಬಹುದಾದ ವಿದ್ಯುತ್ ಕಾತೆಯ ರಾಜ್ಯ ಸಚಿವ ಆರ್.ಕೆ. ಸಿಂಗ್, ನೂತನ ನಿಯಮವು ಏಪ್ರಿಲ್ 1, 2019ರ ಆರ್ಥಿಕ ವರ್ಷದಲ್ಲಿ ಜಾರಿಗೆ ಬರಲಿದ್ದು, ನಮ್ಮ ಉದ್ದೇಶ ಮಾರ್ಚ್ 2019ರೊಳಗೆ 24/7 ವಿದ್ಯುತ್ ಒದಗಿಸುವುದು. ಆನಂತರ ತಾಂತ್ರಿಕ ಕಾರಣಗಳನ್ನು ಹೊರತುಪಡಿಸಿ ಯಾವುದೇ ಕಾರಣ ನೀಡದೆ ಲೋಡ್ ಶೆಡ್ಡಿಂಗ್ ಮಾಡಿದರೆ ಗ್ರಾಹಕರಿಗೆ ದಂಡ ಕಟ್ಟಿಕೊಡಬೇಕು' ಎಂದು ತಿಳಿಸಿದರು.

2019ರ ವೇಳೆಗೆ ದೇಶದಾದ್ಯಂತ ಶೇ. 90 ಪ್ರಿಪೇಯ್ಡ್ ಮೀಟರ್'ಗಳು ಹಾಗೂ ನೇರ ಅನುಕೂಲ ವರ್ಗಾವಣೆ(ಡಿಬಿಟಿ) ಯೋಜನೆಯನ್ನು ಅಳವಡಿಸಲು ಎಲ್ಲ ರಾಜ್ಯಗಳು ಒಪ್ಪಿವೆ. ಮೀಟರ್, ಬಿಲ್ಲಿಂಗ್ ಹಾಗೂ ಸಂಗ್ರಹ ಮುಂತಾದ ಪದ್ದತಿಯನ್ನು ಮಾನವನ ಸಹಾಯವಿಲ್ಲದೆ ಎಲ್ಲವೂ ಮೊಬೈಲ್ ಅಥವಾ ಡಿಜಿಟಲ್ ವ್ಯವಸ್ಥೆಯ ಮೂಲಕ ಅಳವಡಿಸಲಾಗುವುದು.

click me!