ಹಿಮಾಚಲಪ್ರದೇಶ: ಭಾರೀ ಮಳೆ, ಭೂ ಕುಸಿತಕ್ಕೆ 22 ಮಂದಿ ಸಾವು

By Web DeskFirst Published Aug 18, 2019, 9:42 PM IST
Highlights

ಕರ್ನಾಟಕ , ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿ ಸಾವು-ನೋವುಗಳು ಸಂಭವಿಸಿದ್ದವು. ಇದೀಗ ಹಿಮಾಚಲಪ್ರದೇಶದಲ್ಲೂ ಸಹ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ 22 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶಿಮ್ಲಾ, (ಆ.18): ಹಿಮಾಚಲಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಭಾರೀ ಮಳೆಯಿಂದಾಗಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ಧಾರಾಕಾರವಾಗಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ, ಶಿಮ್ಲಾದಲ್ಲಿ ಎಂಟು ಮಂದಿ ಸಾವನ್ನಪ್ಪಿದರೆ, ಕುಲು, ಸಿರ್ಮೌರ್, ಸೋಲನ್ ಹಾಗೂ ಚಂಬಾದಲ್ಲಿ ತಲಾ ಇಬ್ಬರು, ಉನಾ ಮತ್ತು ಲಹೌಲ್- ಸ್ಪಿಟಿ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Office of the District Magistrate, Kullu: Due to heavy rains & incidents of landslides in the region, all private & government educational institutions in the district will remain closed on 19 August. pic.twitter.com/4P8NOcXV57

— ANI (@ANI)

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂದಿನ ಎರಡು ದಿನಗಳ ಕಾಲ ಗುಡುಗು- ಸಿಡಿಲು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಯಲ್ಲಿ ಶಿಮ್ಲಾದಲ್ಲಿ ಸರಕಾರಿ- ಖಾಸಗಿಯ ಎಲ್ಲ ಶಾಲೆ- ಕಾಲೇಜುಗಳಿಗೆ ಸೋಮವಾರದಂದು ರಜಾ ಘೋಷಣೆ ಮಾಡಲಾಗಿದೆ.

click me!