
ನವದೆಹಲಿ[ಜ.30] ಟೈಮ್ಸ್ ನೌ ಮತ್ತು ವಿ.ವಿ.ಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದ್ದು ಎನ್‌ಡಿಎ 252 ಸ್ಥಾನ ಪಡೆದರೆ ಯುಪಿಎ 147 ಸ್ಥಾನ ಪಡೆಯಲಿದೆ. ಇತರೆ ಪಕ್ಷಗಳು 144 ಸ್ಥಾನ ಗಳಿಸಿಕೊಳ್ಳವೆ. ಅಂದರೆ ಎನ್ ಡಿಎ ಬಹುಮತಕ್ಕೆ ಸಮೀಪ ಹೋಗಿ ನಿಲ್ಲಲ್ಲಿದೆ.
ಕರ್ನಾಟಕದ 28 ಸ್ಥಾನಗಳಲ್ಲಿ ಯಾರಿಗೆ ಎಷ್ಟು ಸಿಗಲಿದೆ? ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ. ದೋಸ್ತಿಗಳು ಒಟ್ಟಾಗಿ ಹೋಗುವ ತೀರ್ಮಾನವನ್ನು ಬ-ಹುತೇಕ ತೆಗೆದುಕೊಂಡಿದ್ದು ಏನಾಗಲಿದೆ ಮುಂದೆ ನೋಡಿ.. ರಾಜ್ಯದಲ್ಲಿ 50:50 ಫಲಿತಾಂಶ ಬರಲಿದ್ದು ಬಿಜೆಪಿ 14 ಸ್ಥಾನ ಗಳಿಸಿದರೆ ದೋಸ್ತಿಗಳು 14 ಸ್ಥಾನ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.
ಹಳೇ ಮೈಸೂರು-ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಬಲವಾಗಿವೆ. ಈ ಎರಡೂ ಪಕ್ಷಗಳ ನಡುವಿನ ಪೈಪೋಟಿಯಿಂದಾಗಿ ಬಿಜೆಪಿಗೆ ಲಾಭವಾಗಲಿದೆ. ಈ ಭಾಗದಲ್ಲಿ ಬಿಜೆಪಿ ಸೀಟುಗಳನ್ನು ಗೆಲ್ಲದಿದ್ದರೂ ಮತಗಳಿಕೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ಮೈತ್ರಿಯ ಲಾಭ ಕಾಂಗ್ರೆಸ್‌ಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಅದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ಆಗಲಿದೆ ಎಂದು ಹೇಳಿದೆ. ಉಳಿದ ಪ್ರಮುಖ ರಾಜ್ಯಗಳ ವೋಟ್ ಶೇರ್ ಮತ್ತು ಸೀಟು ಲೆಕ್ಕವನ್ನು ಸಮೀಕ್ಷೆ ಮುಂದಿಟ್ಟಿದೆ.
ಪಂಜಾಬ್ - 13 - ಯುಪಿಎ 12, ಎಎಪಿ 1,
ಹರಿಯಾಣ 10 - ಎನ್ಡಿಎ 8, ಯುಪಿಎ 02
ಉತ್ತರಾಖಂಡ್ ಒಟ್ಟು 5 ಸ್ಥಾನ - ಎನ್ಡಿಎ 05, ಯುಪಿಎ 00, ಬಿಎಸ್ಪಿ 00, ಎಎಪಿ -00, ಇತರೆ -00
ಛತ್ತೀಸ್ಗಡ ಒಟ್ಟು 11 ಸ್ಥಾನ - ಯುಪಿಎ - 06, ಎನ್ಡಿಎ - 05, ಬಿಎಸ್ಪಿ 00, ಇತರೆ -00
ರಾಜಸ್ಥಾನ ಒಟ್ಟು 25 ಸ್ಥಾನ - ಎನ್ಡಿಎ - 17, ಯುಪಿಎ- 08, ಬಿಎಸ್ಪಿ 00, ಇತರೆ -00
ಮಧ್ಯಪ್ರದೇಶ ಒಟ್ಟು 29 ಸ್ಥಾನ - ಎನ್ಡಿಎ 23, ಯುಪಿಎ -06, ಬಿಎಸ್ಪಿ 00, ಇತರೆ -00
ಉತ್ತರಪ್ರದೇಶ ಒಟ್ಟು 80 ಸ್ಥಾನ ಬಿಎಸ್ಪಿ+ಎಸ್ಪಿ - 51, ಎನ್ಡಿಎ - 27, ಯುಪಿಎ - 02 ಇತರೆ - 00
ಗುಜರಾತ್ 26 ಸ್ಥಾನ - ಎನ್ಡಿಎ 24, ಯುಪಿಎ 2, ಇತರೆ 00
ಮಹಾರಾಷ್ಟ್ರ ಒಟ್ಟು 48 - ಯುಪಿಎ 05, ಎನ್ಡಿಎ 43, ,ಇತರೆ 00
ಅಸ್ಸಾಂ ರಾಜ್ಯ ಒಟ್ಟು 14 ಸ್ಥಾನ ಯ 3, ಎ 8, ಇ 3
ಪ.ಬಂಗಾಳ ಒಟ್ಟು 42 ಸ್ಥಾನ - ಟಿಎಂಸಿ 32, ಯುಪಿಎ 1, ಎನ್ಡಿಎ 9,
ಬಿಹಾರ ಒಟ್ಟು 40 ಸ್ಥಾನ - ಯುಪಿಎ 15, ಎನ್ಡಿಎ 25, ಇತರೆ 00
ಜಾರ್ಖಂಡ್ ಒಟ್ಟು 14 ಸ್ಥಾನ - ಯುಪಿಎ 8, ಎನ್ಡಿಎ 6
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.