
ನವದೆಹಲಿ: ಕಳೆದ 3 ವರ್ಷಗಳಿಗೆ ಹೋಲಿಸಿದಾಗ 2017ರಲ್ಲಿ ಪಾಕಿಸ್ತಾನವು ನಡೆಸಿದ ಕದನ ವಿರಾಮ ಉಲ್ಲಂಘನೆಗಳಲ್ಲಿ ಭಾರೀ ಹೆಚ್ಚಳವಾಗಿದೆ. 2016ರಲ್ಲಿ 228 ಬಾರಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕ್ 2017ರಲ್ಲಿ ಈವರೆಗೆ 228 ಬಾರಿ ಕದನ ವಿರಾಮ ಉಲ್ಲಂಘಿಸಿದೆ.
ಸೇನೆಯ ನಿಯಂತ್ರಣದಲ್ಲಿರುವ ಗಡಿನಿಯಂತ್ರಣ ರೇಖೆಯುದ್ದಕ್ಕೂ 2014ರಲ್ಲಿ 153, 2015ರಲ್ಲಿ 152, 2016 ರಲ್ಲಿ 228 ಹಾಗೂ 2017 ಜುಲೈ 11ರವರೆಗೆ 228 ಬಾರಿ ಪಾಕಿಸ್ತಾನವು ಕದಮವಿರಾಮ ಉಲ್ಲಂಘನೆ ಮಾಡಿದೆ, ಎಂದು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಡಾ. ಸುಭಾಷ್ ಭಾಮ್ರೆ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಬಿಎಸ್ಎಫ್ ಕಾರ್ಯಾಚರಿಸುತ್ತಿರುವ ಗಡಿಯಲ್ಲಿ 2017ರಲ್ಲಿ ಪಾಕ್ (ಜೂ.30ರವರೆಗೆ) 23 ಬಾರಿ ಕದನವಿರಾಮ ಉಲ್ಲಂಘಿಸಿದೆ. ಕಳೆದ 3 ವರ್ಷಗಳಿಗೆ ಹೋಲಿಸಿದಾಗ ಈ ವರ್ಷ ಭಾರೀ ಇಳಿಕೆಯಾಗಿದೆ.
2017ರಲ್ಲಿ ಭೂಸೇನೆಯ 4 ಯೋಧರು ಪಾಕ್ ದಾಳಿಯಲ್ಲಿ ಮೃತಪಟ್ಟಿದ್ದರೆ, 21 ಮಂದಿ ಯೋಧರು ಗಾಯಗೊಂಡಿದ್ದಾರೆ. 2014 ರಿಂದ ಈವರೆಗೆ ಸೇನೆಯ 19 ಯೋಧರು ಇಂತಹ ಘಟನೆಗಳಲ್ಲಿ ಹುತಾತ್ಮರಾಗಿದ್ದಾರೆ. 2017ರಲ್ಲಿ ಓರ್ವ ಬಿಎಸ್ಎಫ್ ಸಿಬ್ಬಂದಿ ಮೃತಪಟ್ಟಿದ್ದರೆ, 3 ಮಂದಿ ಗಾಯಗೊಂಡಿದ್ದಾರೆ. ಒಟ್ಟು ಘಟನೆಗಳಲ್ಲಿ 3 ನಾಗರೀಕರು ಬಲಿಯಾಗಿದ್ದರೆ, 14 ಮಂದಿ ಗಾಯಗೊಂಡಿದ್ದಾರೆ.
ಇನ್ನೊಂದು ಕಡೆ, ಸೇನೆಯ ಮೇಲೆ ಉಗ್ರರು ನಡೆಸಿದ ದಾಳಿಗಳಲ್ಲೂ ಏರಿಕೆಯಾಗಿದೆ. 2015ರಲ್ಲಿ 4 ಘಟನೆಗಳು ನಡೆದಿದ್ದರೆ, 2016ರಲ್ಲಿ 9, ಹಾಗೂ 2017 ಜುಲೈ 11ವರೆಗೆ 14 ಘಟನೆಗಳು ನಡೆದಿವೆ. ಉಗ್ರರ ದಾಳಿಯಲ್ಲಿ 9 ಮಂದಿ ಯೋಧರು ಹುತಾತ್ಮರಾಗಿದ್ದಾರೆ.
2017ರಲ್ಲಿ ಉಗ್ರ ಒಳ-ನುಸುಳುವಿಕೆ ಘಟನೆಗಳು ಕೂಡಾ ಎಂದಿನಂತೆ ಮುಂದುವರೆದಿದೆ. 2016ರಲ್ಲಿ 27 ಕೃತ್ಯಗಳು ನಡೆದಿದ್ದರೆ, 11 ಜುಲೈ, 2017ರವೆರೆಗೆ 16 ಪ್ರಯತ್ನಗಳು ನಡೆದಿವೆ. ಇಂತಹ ಸಂದರ್ಭಗಳಲ್ಲಿ 36 ಉಗ್ರರು ಹತ್ಯೆಯಾಗಿದ್ದರೆ, 3 ಯೋಧರು ಈ ವರ್ಷ ಹುತಾತ್ಮರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.