ಕಾಂಗ್ರೆಸ್ ಹಿರಿಯ ಮುಖಂಡ ಶಂಕರ್ ಸಿಂಗ್ ವಾಘೇಲಾ ಪಕ್ಷದಿಂದ ಉಚ್ಚಾಟನೆ

Published : Jul 21, 2017, 03:56 PM ISTUpdated : Apr 11, 2018, 01:09 PM IST
ಕಾಂಗ್ರೆಸ್ ಹಿರಿಯ ಮುಖಂಡ ಶಂಕರ್ ಸಿಂಗ್ ವಾಘೇಲಾ ಪಕ್ಷದಿಂದ ಉಚ್ಚಾಟನೆ

ಸಾರಾಂಶ

ಗುಜರಾತ್ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾರವರನ್ನು 24 ಗಂಟೆ ಮುಂಚೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಶಂಕರ್ ಸಿಂಗ್ ಆರೋಪಿಸಿದ್ದಾರೆ. ಪಕ್ಷದಿಂದ ಉಚ್ಚಾಟಿಸಿದ್ದರೂ ನಾನು ಕಾಂಗ್ರೆಸ್’ನಲ್ಲಿಯೇ ಮುಂದುವರೆಯುತ್ತೇನೆ ಎಂದಿದ್ದಾರೆ.

ಗಾಂಧಿನಗರ (ಜು.21): ಗುಜರಾತ್ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾರವರನ್ನು 24 ಗಂಟೆ ಮುಂಚೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಶಂಕರ್ ಸಿಂಗ್ ಆರೋಪಿಸಿದ್ದಾರೆ. ಪಕ್ಷದಿಂದ ಉಚ್ಚಾಟಿಸಿದ್ದರೂ ನಾನು ಕಾಂಗ್ರೆಸ್’ನಲ್ಲಿಯೇ ಮುಂದುವರೆಯುತ್ತೇನೆ ಎಂದಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಶಂಕರ್ ಸಿಂಗ್’ರವರು ಕಾಂಗ್ರೆಸ್’ಗೆ ರಾಜಿನಾಮೆ ಕೊಡುವ ಸಾಧ್ಯತೆಯಿತ್ತು.  ಇದರಿಂದಾಗಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್’ನಲ್ಲಿ ಒಡಕು ಬರುವ ಸಾಧ್ಯತೆಯಿದೆ. ಹಾಗಾಗಿ ಅವರನ್ನು ಉಚ್ಚಾಟಿಸಲಾಗಿದೆ. ಅವರ ಮುಂದಿನ ನಡೆ ಬಗ್ಗೆ ಈಗಲೇ ಏನೂ ಹೇಳುವುದಕ್ಕೆ ಆಗುವುದಿಲ್ಲ. ಹೊಸ ಪಕ್ಷವನ್ನು ಕಟ್ಟಬಹುದು ಅಥವಾ ಬಿಜೆಪಿಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇಂದು ವಾಘೇಲಾರವರ 77 ನೇ ಹುಟ್ಟುಹಬ್ಬವಾಗಿದ್ದು ಕಾಂಗ್ರೆಸ್’ನ 56 ಶಾಸಕರು ಸಮಾರಂಭದಲ್ಲಿ ಭಾಗವಹಿಸದೇ ದೂರ ಉಳಿದಿದ್ದಾರೆ. “ ಕಾರ್ಯಕರ್ತರಿಗೆ ಸಲಹೆ ನೀಡುವ ಅಧಿಕಾರ ಪಕ್ಷಕ್ಕಿದೆ. ಆದರೆ ಕಾರ್ಯಕರ್ತರು ಪಕ್ಷದ ಜೀತದಾಳುಗಳಲ್ಲ. ಅವರಿಗೆ ಬೇಕಾಗಿದ್ದನ್ನು ಮಾಡುವುದಕ್ಕೆ ಸ್ವತಂತ್ರರು ಎಂದು ವಾಘೇಲಾ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಯಚೂರು: ತಾಯಿ ಬುದ್ದಿವಾದ ಹೇಳಿದಕ್ಕೆ ತುಂಗಭದ್ರಾ ಕಾಲುವೆಗೆ ಹಾರಿ ದುಡುಕಿದ ಮಗಳು!
ಬೆಂಗಳೂರಿನಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ!