
1.ದರ್ಶನ್ -ವಿಜಯಲಕ್ಷ್ಮಿ ವಿಚ್ಛೇದನ ವಿವಾದ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಮನಸ್ಥಾಪ ಉಂಟಾಗಿ, ದರ್ಶನ್ ಪತ್ನಿ ಉಳಿದಿದ್ದ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಸೆಕ್ಯೂರಿಟಿಗೆ ಹೊಡೆದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಯಿತು. ವಿಚ್ಛೇಧನಕ್ಕೂ ಮುಂದಾದ ಬಗ್ಗೆ ವರದಿಯಾಯಿತು. ಮುಂದೆ ವಿಜಯದಶಮಿಯಂದು ಒಟ್ಟಿಗೆ ಮನೆಯಲ್ಲಿ ಪೂಜೆ ಮಾಡುತ್ತಿರುವ ಫೋಟೊಗಳು ಹೊರಬಂದವು. ಅಬಿಮಾನಿಗಳೂಖುಷಿಯಾದ್ರು. ಈ ಮೂಲಕ ಈ ವಿವಾದಕ್ಕೆ ತೆರೆ ಎಳೆಯುವಂತಾಯ್ತು.
2. ದುನಿಯಾ ವಿಜಿ ಎರಡನೇ ಮದುವೆ
ನಟ ದುನಿಯಾ ವಿಜಿ ನಟಿ ಕೀರ್ತಿಯೊಂದಿಗೆ ಎರಡನೇ ಮದುವೆ ಮಾಡಿಕೊಂಡು ಮಗುವಿನೊಂದಿಗಿರುವ ಫೋಟೋಗಳು ಲೀಕಾಗೋ ಮೂಲಕ ಹೊಸ ವಿವಾದಕ್ಕೆ ಕಾರಣವಾದರು. ಆದರೆ ಮೊದಲ ಪತ್ನಿ ನಾಗರತ್ನ ಈ ಬಗ್ಗೆ ತುಟಿಪಿಟಿಕೆನ್ನಲಿಲ್ಲ. ಇದರಿಂದ ಈ ವಿವಾದ ಅಲ್ಲಿಗೆ ತಣ್ಣಗಾಯಿತು. ವಿಜಿ ಎರಡನೇ ಪತ್ನಿಯೊಂದಿಗೆ ಸಂಸಾರ ಹೂಡಿದ್ದಾರೆ.
3.ಪಾಕಿಸ್ಥಾನದವರು ಒಳ್ಳೆಯವರು-ರಮ್ಯಾ ವಿವಾದಾತ್ಮಕ ಹೇಳಿಕೆ
ನಟಿ ರಮ್ಯಾ ಪಾಕಿಸ್ಥಾನವರೂ ನಮ್ಮಂತೆಯೇ ಒಳ್ಳೆಯ ಜನ. ರಮ್ಯಾ ಪಾಕಿಸ್ಥಾನಕ್ಕೆ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋದಾಗ ನಮ್ಮ ನ್ನು ಅಲ್ಲಿ ಬಹಳ ಚೆನ್ನಾಗಿ ನೋಡಿಕೊಂಡರು ಎಂಬ ಹೇಳಿಕೆ ಬಹು ದೊಡ್ಡ ವಿವಾದಕ್ಕೆ ಕಾರಣವಾಯಿತು. ರಮ್ಯಾ ಪಾಕಿಸ್ಥಾನಕ್ಕೆ ಹೋಗಲೆಂದು ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿದವು ಮಂಡ್ಯದಲ್ಲಿ ಮೊಟ್ಟೆ ಹೊಡೆಯೋ ಪ್ರಸಂಗವೂ ನಡೆಯಿತು. ಆದರೆ ರಮ್ಯ ಕ್ಷಮೆಯಾಚಿಸಲಿಲ್ಲ. ಅಲ್ಲಿ ಉಗ್ರರೂ ಇರಬಹುದು. ನಾನವರ ಬಗ್ಗೆ ಮಾತನಾಡಲಿಲ್ಲ. ಪಾಕಿಸ್ಥಾನದವರೆಲ್ಲ ಕೆಟ್ಟವರು ಎನ್ನುವುದು ತಪ್ಪು ಅಲ್ಲಿಯೂ ನಮ್ಮಂತೆ ಒಳ್ಳೆ ಜನ ಇದ್ದಾರೆನ್ನುತ್ತಾ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯೊಲ್ಲ ಎಂದರು.
4. ಬುಲೆಟ್ ಪ್ರಕಾಶ್ ಮೇಲೆ ಕೈ ಮಾಡಿದ ದಿನಕರ್
ಬುಲೆಟ್ ದರ್ಶನ್ ಸಿನಿಮಾ ನಿರ್ಮಾಣ ಮಾಡಲಿದ್ದು ಆ ಸಿನಿಮಾಗೆ ದರ್ಶನ್ ಇನ್ನೂ ಡೇಟ್ಸ್ ಕೊಡದೆಯೇ ಬುಲೆಟ್ ಪಬ್ಲಿಸಿಟಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ದರ್ಶನ್ ಸೋದರ ದಿನಕರ್ ತೂಗುದೀಪ ಬುಲೆಟ್ ಪ್ರಕಾಶ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ, ಹೀನಾ ಮಾನ ಬೈದಿದ್ದಾರೆಂದು ಬುಲೆಟ್ ಪ್ರಕಾಶ್ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿ ನಂತರ ಅಲ್ಲಿಯೇ ಬಗೆಹರಿಯಿತಾದರೆ, ದರ್ಶನ್ ಬುಲೆಟ್ ಸಂಬಂಧ ಹಳಸೋಕೆ ಇದೇ ಕಾರಣವಾಯಿತು.
5. ಸುದೀಪ್- ಪ್ರಿಯಾ ವಿಚ್ಛೇಧನ ಪ್ರಕರಣ
ಪ್ರಿಯಾ ಸುದೀಪ್ ವಿಚ್ಛೇಧನಕ್ಕಾಗಿ ಕೌಂಟುಂಬಿಕ ನ್ಯಾಯಾಲಯ ಮೊರೆ ಹೋಗಿದ್ದಾರೆಂಬುದು ಕಿಚ್ಚನ ಅಬಿಮಾನಿಗಳಿಗೆ ಬಿಗ್ ಶಾಕಿಂಗ್ ನ್ಯೂವ್ಸ್ ಆಗಿ ಕಾಡಿತ್ತು. ಸ್ವತಃ ಕಿಚ್ಚ ಇದು ನಿಜ ಎಂದಿದ್ದರು. ಮುಂದೆ ಹಲವರ ಮಧ್ಯಸ್ಥಿಕೆಯಿಂದ ಈ ಜೋಡಿ ಮತ್ತೆ ಒಂದಾಗಿದೆ ಅನ್ನೋದು ಜಗರ್ ಥಂಡ ಆಡಿಯೋ ರಿಲೀಸ್ನಲ್ಲಿ ಇಬ್ಬರೂ ಒಟ್ಟಿಗೆ ಕುಳಿತಾಗಲೇ ಅಭಿಮಾನಿಗಳಿಗೆ ಖುಷಿ ನೀಡಿತ್ತು
6. ನೀರ್ದೋಸೆ ಹರಿಪ್ರಿಯ ವಿರುದ್ಧ ಹುಚ್ಚ ವೆಂಕಟ್ ಕಿಡಿ
ನಿರ್ದೋಸೆ ಸಿನಿಮಾ ಟ್ರೈಲರ್ ಹಾಡುಗಳು ರಿಲೀಸ್ ಆಗುತ್ತಿದ್ದಂತೆ ಹುಚ್ಚವೆಂಕಟ್ ಕೆಂಡಾಮಂಡಲವಾಗಿ, ಹರಪ್ರಿಯ ಮೇಲೆ ಹರಿಹಾಯ್ದರು. ಇಂಥ ಸಿನಿಮಾ ಬ್ಯಾನ್ ಆಗ್ಬೇಕು ಎಂದು ಸೊಷಿಯಲ್ ಮೀಡಿಯಾದಲ್ಲಿ ಕಿರುಚಾಡಿದರು. ಆದ್ರೆ ನಟಿ ಹರಿಪ್ರಿಯ ಇದು ಪಾತ್ರವಷ್ಟೆ, ಸಿನಿಮಾ ಕತೆಗೆ ತಕ್ಕಂತೆ ಅಭಿನಯಿಸೋದು ನನ್ನ ಕರ್ತವ್ಯ ವೆನ್ನುತ್ತಾ ಹೆಚ್ಚು ಪ್ರತಿಕ್ರಿಯಿಸದೆ ಜಾರಿ ಕೊಂಡರು
7. ಇಂತಿ ನಿನ್ನ ಪ್ರೀತಿಯ ಸೋನು ಗೌಡ ಸ್ಕ್ಯಾಂಡಲ್
ನಟಿ ಇಂತಿ ನಿನ್ನ ಪ್ರೀತಿಯ ಬೆಡಗಿ ಸೋನು ಗೌಡ ಯಾರೊಂದಿಗೊ ಮಲಗಿರುವ ಪರ್ಸನಲ್ ಫೋಟೋಗಳು ಲೀಕಾಗಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಪೋಲೀಸರಿಗೂ ಕಂಪ್ಲೈಂಟ್ ಹೋಯಿತು. ಅವು ನನ್ನ ವೈಕ್ತಿಕ ಫೋಟೋಗಳು ಯಾರೋ ಲೀಕ್ ಮಾಡಿದ್ದಾರೆಂದಷ್ಟೆ ಆರೋಪಿಸಿದ್ದರು. ಅಲ್ಲಿಗೆ ಈ ವಿವಾದಕ್ಕೆ ಫುಲ್ ಸ್ಟಾಪ್ ಬಿತ್ತು.
8. ಹುಚ್ಚಾ ವೆಂಕಟ್ ಬಿಗ್ ಬಾಸ್ನಲ್ಲಿ ಪ್ರಥಮ್ಗೆ ಹೊಡೆದದ್ದು
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದು ದಿನದ ಮಟ್ಟಿಗೆ ಅತಿಥಿಯಾಗಿ ಹೋದ ಹುಚ್ಚ ವೆಂಕಟ್ ಪ್ರಥಮ್ಗೆ ಹೊಡೆದು ಬಂದದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಕಿಚ್ಚ ಸುದೀಪ್ ವೆಂಕಟ್ಗೆ ಪನಿಷ್ಮೆಂ ಟ್ ಆಗೊ ವರೆಗೆ ತಾನು ಆಂಕರಿಂಗ್ ಮಾಡೊಲ್ಲವೆಂದರು. ಪ್ರಥಮ್ ತನಗೇನೂ ದೊಡ್ಡ ಪೆಟ್ಟಾಗಿಲ್ಲ ಎಂದರು.ಹುಚ್ಚ ವೆಂಕಟ್ ಹೊಡೆದದ್ದಕ್ಕೆ ಕ್ಷಮೆಯಾಚಿಸಿ ಬಂದಮೇಲೆ ಎಲ್ಲವೂ ಸುಖಾಂತ್ಯವಾಯಿತು.
9. ಯಶ್ ವಿರುದ್ಧ ಬ್ಯಾಟಿಂಗ್
ರೈತರ ಪರ ನೀರಿನ ಹೋರಾಟಕ್ಕೆ ಯಶ್ ಬರದೆ ಅಮೆರಿಕಾದ ಅಕ್ಕಾ ಸಮ್ಮೇಳನದಲ್ಲಿದ್ದರೆಂದು ಕೆಲವರು ಪ್ರತಿಭಟಿಸಿದಾಗ, ಯಶ್ ಅದಕ್ಕೆ ಪ್ರತಿಕ್ರಿಯೆ ನೀಡಿ, ತಾನು ಯಾವ ಸಮಯದಲ್ಲಾದರೂ ರೈತರ ಪರವಾಗಿ ಬಂದು ನಿಲ್ಲುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು
10.ಮಾಸ್ತಿಗುಡಿ ವಿವಾದ
ದುನಿಯಾ ವಿಜಿ ಅಭಿನಯದ ಮಾಸ್ತಿ ಗುಡಿ ಸಿನಿಮಾದ ಎಲಿಕಾಪ್ಟರ್ ಜಂಪಿಂಗ್ ಸೀನ್ ಚಿತ್ರೀಕರಿಸುವಾಗ ನಟ ಅನಿಲ್ ಮತ್ತು ಉದಯ್ 28 ಅಡಿ ಎತ್ತರದಿಂದ ಜಿಗಿಯುವ ದೃಶ್ಯದಲ್ಲಿ ಲೈಫ್ ಜಾಕೆಟ್ಸ್ ಇಲ್ಲದೆ ನೀರಿಗೆ ಹಾರಿ ಸಾವನ್ನಪ್ಪಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಯಾವುದೇ ಪ್ರಕಾಷನ್ಸ್ ಇಲ್ಲದೆ ನಟರ ಸಾವಿಗೆ ಕಾರಣವಾದ ಚಿತ್ರತಂಡದ ವಿರುದ್ಧ ಎಫ್ ಐಆರ್ ದಾಖಲಾಗಿ ನಿರ್ದೇಶಕ ಸಾಹಸ ನಿರ್ದೇಶಕ ನಿರ್ಮಾಪಕ ನಟ ಸೆಋಇದಂತೆ ಎಲ್ಲರೂ ಬಂಧನಕ್ಕೊಳಗಾಗಿ ಬೇಲ್ ಮೇಲೆ ಹೊರಗೆ ಬಂದರು, ಆದರೆ ಇಂಡಸ್ಟ್ರಿ ಎರಡು ಜೀವಗಳನ್ನು ಕಳೆದು ಕೊಂಡ ದುಖದಲ್ಲಿ ಮುಳುಗಿತು.
ಇವಿಷ್ಟು 2016ರ ಟಾಪ್ 10 ವಿವಾದಗಳು
ಸುಗುಣ, ಎಂಟರ್'ಟೈನ್ಮೆಂಟ್ ಬ್ಯೂರೋ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.