2 ಸಾವಿರದ ನೋಟುಗಳು ಪುಡಿಪುಡಿ!?

Published : Jan 13, 2017, 05:20 PM ISTUpdated : Apr 11, 2018, 12:50 PM IST
2 ಸಾವಿರದ ನೋಟುಗಳು ಪುಡಿಪುಡಿ!?

ಸಾರಾಂಶ

. ಶುಕ್ರವಾರ ತಮ್ಮ ಹುಟ್ಟಹಬ್ಬ ಅಂಗವಾಗಿ ಮೊಬೈಲ್ ತೆಗೆದುಕೊಳ್ಳಲು ಹಣ ತೆಗೆದಾಗ 2 ಸಾವಿರ ಮುಖಬೆಲೆಯ ನೋಟುಗಳು ಪುಡಿ ಪುಡಿಯಾಗಿದ್ದವು

ಮೈಸೂರು(ಜ.13): ಮನೆಯ ಬೀರುವಿನಲ್ಲಿ ಇರಿಸಿದ್ದ 2 ಸಾವಿರ ಮುಖಬೆಲೆಯ ನೋಟುಗಳು ಪುಡಿ ಪುಡಿಯಾಗಿ ಉದುರಿದ ಘಟನೆ ಮೈಸೂರಿನ ಪಡುವಾರಹಳ್ಳಿಯಲ್ಲಿ (ವಿನಾಯಕನಗರ) ಶುಕ್ರವಾರ ನಡೆದಿದೆ. ವಿನಾಯಕನಗರದ ವಿನೋದ್‌ಕುಮಾರ್ ಎಂಬವರು ಡಿ.30ರಂದು ವಿ.ವಿ. ಮೊಹಲ್ಲಾದ ಕರ್ಣಾಟಕ ಬ್ಯಾಂಕ್‌ನಿಂದ  10,000 ಡ್ರಾ ಮಾಡಿದ್ದರು. ಇದರಲ್ಲಿ 2 ಸಾವಿರ ಮುಖಬೆಲೆಯ 4 ನೋಟುಗಳು ಹಾಗೂ 100 ಮುಖಬೆಲೆಯ 20 ನೋಟುಗಳು ಇದ್ದವು.

ಡ್ರಾ ಮಾಡಿದ್ದ ಹಣವನ್ನು ಮನೆಯ ಬೀರುವಿನಲ್ಲಿ ಇರಿಸಿದ್ದರು. ಶುಕ್ರವಾರ ತಮ್ಮ ಹುಟ್ಟಹಬ್ಬ ಅಂಗವಾಗಿ ಮೊಬೈಲ್ ತೆಗೆದುಕೊಳ್ಳಲು ಹಣ ತೆಗೆದಾಗ 2 ಸಾವಿರ ಮುಖಬೆಲೆಯ ನೋಟುಗಳು ಪುಡಿ ಪುಡಿಯಾಗಿದ್ದವು. ಇದರಿಂದ ಕಂಗಾಲಾದ ಅವರು ಪುಡಿಯಾದ ನೋಟುಗಳೊಂದಿಗೆ ಬ್ಯಾಂಕ್‌ಗೆ ಧಾವಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ ಸಚಿವರನ್ನು ಟಾರ್ಗೆಟ್ ಮಾಡಿದ ಪಾಕಿಸ್ತಾನದ ಐಎಸ್‌ಐ: ಕೇಂದ್ರ ಗೃಹ ಇಲಾಖೆಯಿಂದ ಭದ್ರತೆ ಹೆಚ್ಚಳ
ಆಸ್ಟ್ರೇಲಿಯಾದ ಸಿಡ್ನಿ ಬೋಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಉಗ್ರರ ಗುಂಡಿನ ದಾಳಿ: 12 ಸಾವು