ಯೋಧರ ಆರೋಪದಲ್ಲಿ ಹುರುಳಿಲ್ಲ: ಪ್ರಧಾನಿ ಕಾರ್ಯಾಲಯಕ್ಕೆ ಗೃಹ ಇಲಾಖೆ ಸ್ಪಷ್ಟನೆ

By Suvarna Web DeskFirst Published Jan 13, 2017, 4:48 PM IST
Highlights

ಗಡಿ ಕಾಯುವ ಯೋಧರಿಗೆ ಒದಗಿಸಲಾಗುವ ಕಳಪೆ ಆಹಾರ ಹಾಗೂ ಇನ್ನಿತರ ಅವ್ಯವಸ್ಥೆಗಳ ಬಗ್ಗೆ ಬಿಎಸ್’ಎಫ್ ಹಾಗೂ ಸಿಆರ್’ಪಿಎಫ್  ಯೋಧರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್’ಲೋಡ್ ಮಾಡಿದ್ದರು.

ನವದೆಹಲಿ (ಜ.13): ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಡುವ ಮೂಲಕ ದೇಶಾದಾದ್ಯಂತ  ಸಂಚಲನ ಮೂಡಿಸಿದ್ದ ಬಿಎಸ್’ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಗೃಹ ಇಲಾಖೆಯು ಪ್ರಧಾನಿ ಕಾರ್ಯಾಲಯಕ್ಕೆ ನೀಡಿರುವ ಸ್ಪಷ್ಟೀಕರಣದಲ್ಲಿ ಹೇಳಿದೆ.

ಯೋಧರಿಗೆ ಎಲ್ಲೂ ಆಹಾರದ ಕೊರತೆಯಿಲ್ಲ, ಒದಗಿಸುವ ಆಹಾರದ ಗುಣಮಟ್ಟ ಕೂಡಾ ನಿಯಮಿತವಾಗಿ ಪರಿಶೀಲಿಸಲಾಗುತ್ತದೆ, ಎಂದು ಗೃಹ ಇಲಾಖೆಯು ಹೇಳಿದೆ.

ಗಡಿ ಕಾಯುವ ಯೋಧರಿಗೆ ಒದಗಿಸಲಾಗುವ ಕಳಪೆ ಆಹಾರ ಹಾಗೂ ಇನ್ನಿತರ ಅವ್ಯವಸ್ಥೆಗಳ ಬಗ್ಗೆ ಬಿಎಸ್’ಎಫ್ ಹಾಗೂ ಸಿಆರ್’ಪಿಎಫ್  ಯೋಧರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್’ಲೋಡ್ ಮಾಡಿದ್ದರು.

ಯೋಧರ ದುಸ್ಥಿತಿಗೆ ಸೇನೆಯ ಹಿರಿಯ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣವೆಂದು ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆ ಕುರಿತು ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಾರ್ಯಾಲಯ ಗೃಹ ಇಲಾಖೆಗೆ ಸೂಚಿಸಿತ್ತು.

click me!