ಪತ್ರಕರ್ತರನ್ನು ಕರೆಸಿ ಎನ್‌ಕೌಂಟರ್ ತೋರಿಸಿದ ಪೊಲೀಸರು!

Published : Sep 20, 2018, 04:28 PM ISTUpdated : Sep 20, 2018, 04:39 PM IST
ಪತ್ರಕರ್ತರನ್ನು ಕರೆಸಿ ಎನ್‌ಕೌಂಟರ್ ತೋರಿಸಿದ ಪೊಲೀಸರು!

ಸಾರಾಂಶ

ಉತ್ತರಪ್ರದೇಶಲ್ಲಿ ಮುಂದುವರೆದ ಪಾತಕಿಗಳ 'ಸಫಾಯಿ'! ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ಪಾತಕಿಗಳು ಮಟಾಷ್! ಪತ್ರಕರ್ತರನ್ನು ಕರೆಸಿ ನೇರ ಪ್ರಸಾರ ಮಾಡಿಸಿದ ಪೊಲೀಸರು! ಉತ್ತರಪ್ರದೇಶ ಅಲಿಗಡ್ ನಲ್ಲಿ ಪೊಲೀಸ್ ಎನ್‌ಕೌಂಟರ್

ಲಕ್ನೋ(ಸೆ.20): ಉತ್ತರಪ್ರದೇಶದಲ್ಲಿ ಪಾತಕಿಗಳ 'ಸಫಾಯಿ' ಮುಂದುವರೆದಿದ್ದು, ಇಂದು ಬೆಳಗ್ಗೆ ಪೊಲೀಸರು ಸಮಾಜಕ್ಕೆ ಕಂಟಕವಾಗಿದ್ದ ಮತ್ತಿಬ್ಬರು ಭೂಗತ ಪಾತಕಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.

ಇಲ್ಲಿನ ಅಲಿಗಡ್ ಬಳಿ ಇಂದು ಬೆಳಗಿನ ಜಾವ ಭೂಗತ ಪಾತಕಿಗಳು ಅಡಗಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಪೊಲೀಸರು, ಶರಣಾಗುವಂತೆ ಸಲಹೆ ನೀಡಿದರು. ಆದರೆ ಪೊಲೀಸರತ್ತ ಗುಂಡು ಹಾರಿಸಲು ಪ್ರಾರಂಭಿಸಿದ ಪಾತಕಿಗಳು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಎನ್‌ಕೌಂಟರ್ ಮಾಡಿ ಪಾತಕಿಗಳನ್ನು ಹೊಡೆದುರುಳಿಸಿದ್ದಾರೆ.

ಇನ್ನು ಈ ಎನ್‌ಕೌಂಟರ್‌ಗೂ ಮೊದಲು ಪತ್ರಕರ್ತರನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು, ಎನ್‌ಕೌಂಟರ್‌ ಕುರಿತು ವಿಡಿಯೋ ಮಾಡಿಸಿದ್ದಾರೆ. ಮುಶ್ತಾಕಿಮ್ ಮತ್ತು ನೌಶಾದ್ ಎಂಬ ಪಾತಕಿಗಳ ಎನ್‌ಕೌಂಟರ್‌ನ್ನು ಪತ್ರಕರ್ತರು ನೇರ ಪ್ರಸಾರ ಮಾಡಿದರು.

ಮುಶ್ತಾಕಿಮ್ ಮತ್ತು ನೌಶಾದ್ ಇಬ್ಬರೂ ಪಾತಕಿಗಳು ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ