
ಪುಣೆ(ಆ.09): ಬಿಸಿಬಿಸಿ ಉಪ್ಪಿಟ್ಟಿನಲ್ಲಿ 1.29 ಕೋಟಿ ರು. ಅಕ್ರಮ ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಪುಣೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಇಬ್ಬರೂ ಪ್ರಯಾಣಿಕರು ದುಬೈಗೆ ತೆರಳುತ್ತಿದ್ದರು. ಇವರಲ್ಲಿ ವೈ. ನಿಶಾಂತ್ ಎಂಬ ಪ್ರಯಾಣಿಕನ ಮೇಲೆ ಸಂದೇಹ ಬಂದು ಆತನ ಚೆಕ್ ಇನ್ ಬ್ಯಾಗನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದರು. ಆಗ ಅದರಲ್ಲಿ ಹಾಟ್ ಬಾಕ್ಸ್ ಪತ್ತೆಯಾಯಿತು.
‘ಹಾಟ್ ಬಾಕ್ಸಲ್ಲಿ ಉಪ್ಪಿಟ್ಟು ಇಟ್ಟುಕೊಂಡಿದ್ದೇನೆ’ ಎಂದು ನಿಶಾಂತ್ ಉತ್ತರಿಸಿದರೂ ನಿರೀಕ್ಷೆಯಿಂತ ಭಾರವಾಗಿತ್ತು. ಅದನ್ನು ಬಿಚ್ಚಿ ತಪಾಸಿಸಿದಾಗ ಉಪ್ಪಿಟ್ಟಿನಲ್ಲಿ ಆತ ಕಪ್ಪು ಪ್ಲಾಸ್ಟಿಕ್ ಚೀಲ ಇಟ್ಟುಕೊಂಡಿದ್ದು, ಅದರಲ್ಲಿ 86,600 ಅಮೆರಿಕನ್ ಡಾಲರ್ ಹಾಗೂ 15 ಸಾವಿರ ಯುರೋ ಕರೆನ್ಸಿಗಳನ್ನು ಇಟ್ಟುಕೊಂಡಿದ್ದು ಪತ್ತೆಯಾಯಿತು. ಬಳಿಕ ಎಚ್. ರಂಗಲಾಣಿ ಎಂಬ ಮಹಿಳಾ ಪ್ರಯಾಣಿಕಳ ಮೇಲೂ ಇದೇ ಸಂದೇಹ ಉಂಟಾಯಿತು. ಆಕೆಯ ಹಾಟ್ ಬಾಕ್ಸ್ ನಲ್ಲೂ 86,200 ಅಮೆರಿಕನ್ ಡಾಲರ್ ಹಾಗೂ 15 ಸಾವಿರ ಯುರೋ ಕರೆನ್ಸಿಗಳು ಪತ್ತೆಯಾದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.