ನಾಡನ್ನೇ ಬೆಚ್ಚಿ ಬೀಳಿಸಿದ್ದ 18 ವರ್ಷದ ಹಿಂದಿನ ಭೀಮನ ಅಮಾವಾಸ್ಯೆ

Published : Aug 11, 2018, 04:50 PM ISTUpdated : Sep 09, 2018, 09:23 PM IST
ನಾಡನ್ನೇ ಬೆಚ್ಚಿ ಬೀಳಿಸಿದ್ದ 18 ವರ್ಷದ ಹಿಂದಿನ ಭೀಮನ ಅಮಾವಾಸ್ಯೆ

ಸಾರಾಂಶ

ಭೀಮನ ಅಮಾವಾಸ್ಯೆ ಎಂದರೆ ಇಡೀ ಕರುನಾಡ ಜನ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ಹೌದು ಇದಕ್ಕೆ ಕಾರಣ ಇದೆ. ಅದು 2000ನೇ ಇಸವಿ ಭೀಮನ ಅಮಾವಾಸ್ಯೆ ದಿನವೇ ಕಾಡುಗಳ್ಳ, ನರಹಂತಕ ವೀರಪ್ಪನ್ ವರನಟ ಡಾ ರಾಜ್ ಕುಮಾರ್ ಅವರನ್ನು ಅಪಹರಣ ಮಾಡಿದ್ದ. ಗಾಜನೂರಿನ ಮನೆಯಿಂದ ಡಾ. ರಾಜ್ ಅವರನ್ನು ತನ್ನ ಜತೆ ಕಾಡಿಗೆ ಕರೆದೊಯ್ದಿದ್ದ. ಇಂದು ಕೂಡಾ ಭೀಮನ ಅಮಾವಾಸ್ಯೆ.

ಭೀಮನ ಅಮಾವಾಸ್ಯೆ ದಿನ ಬಂತೆಂದರೆ ಸಾಕು ಕಾಲಚಕ್ರ 18 ವರ್ಷಗಳ ಹಿಂದಕ್ಕೆ ಹೊರಳುತ್ತದೆ. ಅಂದು ಭೀಮನ ಅಮಾವಾಸ್ಯೆ. ಅದು ಜುಲೈ 30, 2000. ಪತಿಗೆ ವಿಶೇಷ ಸ್ಥಾನ ನೀಡಿರುವ ಇದೇ ದಿನ ವರನಟ ಡಾ. ರಾಜ್ ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿ ಕಾಡಿಗೆ ಕದ್ದೊಯ್ಯುತ್ತಾನೆ.

ಇಲ್ಲಿಗೆ 18 ವರ್ಷ ಕಳೆದಿದೆ. ಡಾ. ರಾಜ್ ಕುಮಾರ್ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಪಾರ್ವತಮ್ಮ ಅವರನ್ನು ನಾವು ಕಳೆದುಕೊಂಡಿದ್ದೇವೆ. ಕನ್ನಡದ ಸಾರ್ವಭೌಮ ಕಾಡುಗಳ್ಳನ ಜತೆ ಭೀಮನ ಅಮಾವಾಸ್ಯೆಜಯಿಂದ 108 ದಿನ ಕಾಡಲ್ಲಿ ಅಲೆಯುತ್ತಾರೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸರಕಾರಗಳೆರಡೂ ನಿರಂತರ ಯತ್ನ ಮಾಡಿ ಡಾ. ರಾಜ್ ಅವರನ್ನು ಬಿಡಿಸಿಕೊಂಡು ಬಂದಿರುವುದು ಇತಿಹಾಸ. ವೀರಪ್ಪನ್ ಸಹ ನಂತರ ಅಷ್ಟೆ ದಾರುಣ ಹತ್ಯೆಗೆ ಈಡಾಗುತ್ತಾನೆ.

ವೀರಪ್ಪನ್ ಹತ್ಯೆಯಾಗಿರಬಹುದು. ಆದರೆ ವೀರಪ್ಪನ್ ಅಂತಹ ಮನಸ್ಸುಗಳು ಸಮಾಜವನ್ನು ಕೊಳ್ಳೆ ಹೊಡೆಯುತ್ತಿವೆ.  ಕಾಲ ಮಸರಿದಿದೆ. ವರ್ಷವೂ ಭೀಮನ ಅಮಾವಾಸ್ಯೆ ಬರುತ್ತದೆ. ಗಂಡಂದಿರಿಗೆ ಪತಿವ್ರತೆಯರು ಪೂಜೆ ಮಾಡುತ್ತಾರೆ. ಆದರೆ ಡಾ. ರಾಜ್ ಅಪಹರಣದ ಕರಾಳ ನೆನಪು ಮಾತ್ರ ಮರೆಯಾಗಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ