ಟ್ರಂಪ್​ ಪ್ರಮಾಣವಚನ ಬಹಿಷ್ಕರಿಸಿದ 18 ನಾಯಕರು

By Suvarna Web DeskFirst Published Jan 16, 2017, 4:00 AM IST
Highlights

ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಪ್ರಭಾವವನ್ನು ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರ  ಜಾನ್ ಲೆವೀಸ್ ಅವರನ್ನು ಟೀಕಿಸಿರುವುದನ್ನು ಖಂಡಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. 

ವಾಷಿಂಗ್ಟನ್ (ಜ.16): ಈ ತಿಂಗಳ 20ರಂದು ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ  ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಸಮಾರಂಭವನ್ನು ಬಹಿಷ್ಕರಿಸಲು ಡೆಮಾಕ್ರಟಿಕ್ ಪಕ್ಷದ 18 ಸೆನೆಟರ್‌ಗಳು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಪ್ರಭಾವವನ್ನು ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರ  ಜಾನ್ ಲೆವೀಸ್ ಅವರನ್ನು ಟೀಕಿಸಿರುವುದನ್ನು ಖಂಡಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. 

ಟಿ.ವಿ ಸಂದರ್ಶನವೊಂದರಲ್ಲಿ ಮಾತನಾಡಿದ ಲೂಯಿಸ್ ಅವರು, ಟ್ರಂಪ್ ಕಾನೂನುಬದ್ಧ ಅಧ್ಯಕ್ಷರಲ್ಲ. ಹೀಗಾಗಿ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಹೇಳಿದ್ದರು.

ಅಟಾರ್ನಿ ಜನರಲ್ ಆಗಿ ಜೆಫ್ ಸೆಷನ್ಸ್  ಅವರನ್ನು ನೇಮಿಸಿದ್ದ ಟ್ರಂಪ್ ನಿರ್ಧಾರವನ್ನು ಕಳೆದ ವಾರ ಟೀಕಿಸಿದ್ದ ಮೂವರು ಕಪ್ಪುವರ್ಣೀಯ ಸೆನೆಟರ್‌ಗಳ ಪೈಕಿ ಲೂಯಿಸ್ ಕೂಡಾ ಒಬ್ಬರು.

click me!