ಬಿಜೆಪಿಗೆ 17 ಪಕ್ಷಗಳಿಂದ ವಿರೋಧ

By Web DeskFirst Published Aug 3, 2018, 11:45 AM IST
Highlights

ಇದೀಗ 17 ಪಕ್ಷಗಳು ಬಿಜೆಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಬ್ಯಾಲೆಟ್ ಪೇಪರ್‌ನಲ್ಲಿಯೇ ನಡೆಸ ಬೇಕು ಎಂದು ಚುನಾವಣಾ ಆಯೋಗದ ಕದ ತಟ್ಟಲು
ಮುಂದಾಗಿವೆ. 

ನವದೆಹಲಿ: ಬಿಜೆಪಿ ಇವಿಎಂ ತಿರುಚಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ ಎಂದು ಆರೋಪಿಸುತ್ತಲೇ ಬಂದಿರುವ ವಿಪಕ್ಷಗಳು ಇದೀಗ ಮುಂದಿನ ಲೋಕಸಭೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ನಲ್ಲಿಯೇ ನಡೆಸ ಬೇಕು ಎಂದು ಚುನಾವಣಾ ಆಯೋಗದ ಕದ ತಟ್ಟಲು ಮುಂದಾಗಿವೆ. 

ಪಶ್ಚಿಮ ಬಂಗಾಳ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್‌ಪಿ, ಎನ್‌ಸಿಪಿ, ಆರ್‌ಜೆಡಿ ಸೇರಿದಂತೆ 17 ಪಕ್ಷಗಳು ಒಂದುಗೂಡಿವೆ.ಮುಂದಿನ ವಾರ ವಿಪಕ್ಷಗಳು ಆಯೋಗವನ್ನು ಸಂಪರ್ಕಿಸುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಗೆ ರಷ್ಯಾ ಹಸ್ತಕ್ಷೇಪ

ವಾಷಿಂಗ್ಟನ್: 2016 ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಪರೋಕ್ಷವಾಗಿ ಮಧ್ಯಪ್ರವೇಶ ಮಾಡುವ ಮೂಲಕ ಹಿಲರಿ ಕ್ಲಿಂಟನ್  ಅವರನ್ನು ಸೋಲಿಸಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಕಾರಣವಾಗಿದ್ದ ರಷ್ಯಾ ಸರ್ಕಾರ, ಮುಂಬರುವ ಭಾರತೀಯ ಲೋಕಸಭಾ ಚುನಾವಣೆಯಲ್ಲೂ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಸಂಸತ್‌ನ ಗುಪ್ತಚರ ಸಮಿತಿ ಮುಂದೆ ಹಾಜರಾಗಿದ್ದ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬಲಿಯೋಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಫಿಲಿಫ್ ಎನ್. ಹೋವರ್ಡ್ ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆ. ಆನ್ ಲೈನ್ ಸಾಮಾಜಿಕ ಜಾಲತಾಣಗಳ ಮೇಲೆ ವಿದೇಶಿ ಪ್ರಭಾವದ ಕುರಿತ ವಿಚಾರಣೆ ವೇಳೆ ಹೋವರ್ಡ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕ ಮಾಧ್ಯಮಗಳು ಅತ್ಯಂತ ವೃತ್ತಿಪರವಾಗಿದೆ. 

ಆದರೂ ಹಿಂದಿನ ಚುನಾವಣೆಯಲ್ಲಿ ಅವರು  ರಷ್ಯಾದ ಹಸ್ತಕ್ಷೇಪಕ್ಕೆ ಬಲಿಯಾಗುವಂತೆ ಆಗಿತ್ತು. ಮುಂದಿನ ದಿನಗಳಲ್ಲಿ ಭಾರತ, ಬ್ರೆಜಿಲ್‌ನಂಥ ದೇಶಗಳ ಚುನಾವಣೆ ಮೇಲೂ ರಷ್ಯಾ ಹಸ್ತೇಕ್ಷೇಪ ನಡೆಸಬಹುದು. ಇದಕ್ಕೆ ಅಲ್ಲಿನ ಮಾಧ್ಯಮಗಳು ಅಷ್ಟು ವೃತ್ತಿಪರ ಇಲ್ಲದೇ ಇರುವುದೇ ಕಾರಣ ಎಂದು ಹೇಳಿದ್ದಾರೆ.  

click me!