
ನವದೆಹಲಿ: ಖಾಸಗಿ ಹವಾಮಾನ ಮುನ್ಸೂಚನೆ ನೀಡುವ ಸ್ಕೈಮೆಟ್ ಸಂಸ್ಥೆ, ಮುಂಗಾರು ಕುರಿತ ತನ್ನ ಮುನ್ಸೂಚನೆಯನ್ನು ಬದಲಾವಣೆ ಮಾಡಿದೆ. ಈ ಹಿಂದೆ ಈ ವರ್ಷ ಸಾಮಾನ್ಯ ಸರಾಸರಿಯ ಮಳೆ ಸುರಿಯಲಿದೆ ಎಂದು ಹೇಳಿದ್ದ ಸಂಸ್ಥೆ ಅದನ್ನು ಇದೀಗ ಸಾಮಾನ್ಯಕ್ಕಿಂತ ಕಡಿಮೆ ಎಂದು ಬದಲಾಯಿಸಿದೆ.
ಈ ಮೂಲಕ ದೇಶದ ಹಲವು ಬಾಗಗಳಲ್ಲಿ ಮುಂಗಾರು ಕೊರತೆ ಉಂಟಾಗಬಹುದು ಎಂದು ಹೇಳಿದೆ. ಏಪ್ರಿಲ್‌ನಲ್ಲಿ ಅಂದಾಜಿಸಲಾದ ಪ್ರಕಾರ, ಜೂನ್-ಸೆಪ್ಟೆಂಬರ್ ಮುಂಗಾರು ಅವಧಿಯಲ್ಲಿ ದೀರ್ಘಾವಧಿ ಸರಾಸರಿ(ಎಲ್‌ಪಿಎ) ಶೇ.100 ರಷ್ಟಿರಲಿದೆ, ಇದರಲ್ಲಿ ಶೇ. 5ರಷ್ಟು ಹೆಚ್ಚು ಕಡಿಮೆ ಯಾಗಬಹುದು ಎಂದು ಸ್ಕೈಮೆಟ್ ಹೇಳಿತ್ತು. ಆದರೆ ಪ್ರಸ್ತುತ ಪರಿಷ್ಕೃತ ವರದಿಗಳ ಅನುಸಾರ, ಎಲ್‌ಪಿಎ ಶೇ.92ಕ್ಕೆ ಇಳಿಕೆಯಾಗಿದೆ. ಮುಂದಿನ ಒಂದು ವಾರ ದಕ್ಷಿಣ ಭಾರತದಲ್ಲಿ ಮಳೆ ಕಡಿಮೆ ಯಾಗಲಿದೆ, ಉತ್ತರ ಭಾರತದಲ್ಲಿ ಚೆನ್ನಾಗಿ ಮಳೆಯಾಗಲಿದೆ ಎಂದು ಸ್ಕೈಮೆಟ್ ಭವಿಷ್ಯ ನುಡಿದಿದೆ.
ಎಲ್‌ಪಿಎ ಶೇ. 96-104 ರ ಪ್ರಮಾಣ ದಲ್ಲಿದ್ದಾಗ ಅದನ್ನು ಸಹಜ ಮುಂಗಾರು ಎಂದು ಪರಿಗಣಿಸಲಾಗುತ್ತದೆ. ಹವಾಮಾನ ಇಲಾಖೆ ಏಪ್ರಿಲ್-ಮೇನಲ್ಲಿ ನಡೆಸಿದ್ದ ವಿಶ್ಲೇಷಣೆಯಲ್ಲಿ, ಶೇ.97 ಎಲ್‌ಪಿಎಯೊಂದಿಗೆ ಈ ಬಾರಿ ಸಹಜ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಸ್ಕೈಮೆಟ್ ವಿಶ್ಲೇಷಣೆಗೆ ಪ್ರತಿಕ್ರಿಯಿಸಿರುವ ಹವಾಮಾನ ಇಲಾಖೆ, ಮಳೆ ಕಡಿಮೆಯಾಗುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಮಳೆಯ ಪರಿಸ್ಥಿತಿ ಒಂದೇ
ವಾರದಲ್ಲಿ ಸಂಪೂರ್ಣ ಬದಲಾವಣೆ ತರಬಹುದು ಎಂದು ಭರವಸೆ ವ್ಯಕ್ತಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.