ಆಗಸ್ಟ್‌ನಲ್ಲಿ ಅತೀ ಹೆಚ್ಚು ಮಳೆಗೆ ಸಾಕ್ಷಿಯಾದ ಭಾರತ

Published : Sep 02, 2019, 09:37 AM IST
ಆಗಸ್ಟ್‌ನಲ್ಲಿ ಅತೀ ಹೆಚ್ಚು ಮಳೆಗೆ ಸಾಕ್ಷಿಯಾದ ಭಾರತ

ಸಾರಾಂಶ

ಮುಂಗಾರು ತಡವಾಗಿ ಆಗಮಿಸಿದರೂ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನವದೆಹಲಿ [ಸೆ.02]: ಈ ಬಾರಿ ಮುಂಗಾರು ತಡವಾಗಿ ಆಗಮಿಸಿದರೂ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್‌ ತಿಂಗಳಿನಲ್ಲಿ ದೇಶದ ಅರ್ಧ ಭಾಗದಲ್ಲಿ ವಾಡಿಕೆಗಿಂತ ಶೇ.15 ರಷ್ಟುಹೆಚ್ಚು ಮಳೆಯಾಗಿದ್ದು, ಸತತ ಎರಡನೇ ತಿಂಗಳು ಹೆಚ್ಚಿನ ಮಳೆಯಾಗಿದೆ. 

ಜೂನ್‌ ತಿಂಗಳಿನಲ್ಲಿ ದೀರ್ಘಾವಧಿ ಸರಾಸರಿ ಶೇ. 87 ರಷ್ಟುಮಳೆ ಕೊರತೆಯುಂಟಾಗಿದ್ದು, ಜುಲೈನಲ್ಲಿ ದೀರ್ಘಾವಧಿ ಸರಾಸರಿ ಶೇ.109 ರಷ್ಟುಮಳೆ ಹೆಚ್ಚಳವಾಗಿದೆ. ಆಗಸ್ಟ್‌ ತಿಂಗಳಿನಲ್ಲಿ ದಾಖಲೆ ಮಳೆ ಸುರಿದಿದ್ದು, ದೀರ್ಘಾವಧಿ ಸರಾಸರಿ ಶೇ. 115 ರಷ್ಟುಹೆಚ್ಚು ಮಳೆಯಾಗಿದೆ. ಸಾಧಾರಣವಾಗಿ ಆಗಸ್ಟ್‌ನಲ್ಲಿ ದೀರ್ಘಾವಧಿ ಸರಾಸರಿ ಶೇ.89 ರಷ್ಟುಮಳೆಯಾಗುತ್ತಿತ್ತು. ಇದೇ ವೇಳೆ ಜೂನ್‌ ನಿಂದ ಆಗಸ್ಟ್‌ ವರೆಗೆ ಯಾವುದೇ ಮಳೆ ಕೊರತೆಯಾಗಿಲ್ಲ . ಸೆಪ್ಟೆಂಬರ್‌ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೇಶದ ಶೇ.26ರಷ್ಟುಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಶೇ.22 ರಷ್ಟುಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಶೇ.23 ರಷ್ಟುಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಶೇ.29 ರಷ್ಟುಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಶೇ.56 ರಷ್ಟುಹೆಚ್ಚಿನ ಮಳೆಯಾಗಿದೆ. ಪೆಸಿಫಿಕ್‌ ಸಾಗರದಲ್ಲಿ ಎಲ್‌-ನೋ ಪರಿಣಾಮದಿಂದಾಗಿ ಮುಂಗಾರು ತಹಬದಿಗೆ ಬಂದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್