ತಾನು ಸತ್ತುಹೋಗಿದ್ದಕ್ಕೆ ರಜೆ ಕೇಳಿದ ವಿದ್ಯಾರ್ಥಿಗೆ ರಜೆ ಕೊಟ್ಟ ಪ್ರಿನ್ಸಿಪಾಲ್‌

Published : Sep 02, 2019, 09:34 AM IST
ತಾನು ಸತ್ತುಹೋಗಿದ್ದಕ್ಕೆ ರಜೆ ಕೇಳಿದ  ವಿದ್ಯಾರ್ಥಿಗೆ ರಜೆ ಕೊಟ್ಟ ಪ್ರಿನ್ಸಿಪಾಲ್‌

ಸಾರಾಂಶ

ಶಾಲೆಗೆ ರಜೆ ಹಾಕಲು ವಿದ್ಯಾರ್ಥಿಗಳು ಏನೇನೋ ಕಸರತ್ತು, ನಾಟಕಗಳನ್ನು ಮಾಡುತ್ತಾರೆ. ಆದರೆ ತನ್ನ ಸಾವಿಗೆ ರಜೆ ಕೊಡಬೇಕೆಂದು ವಿದ್ಯಾರ್ಥಿಗಳು ಕೋರಿದ್ದು ನೀವು ಕೇಳಿದ್ದೀರಾ? ಅದರೆ ವಿದ್ಯಾರ್ಥಿಯೊಬ್ಬ ತಾನು ಸತ್ತು ಹೋಗಿದ್ದು ಹಾಗಾಗಿ ರಜೆ ಕೊಡಬೇಕು ಎಂದು ಕೇಳಿ ಪ್ರಾಂಶುಪಾಲರಿಂದಲೇ ರಜೆ ಗಿಟ್ಟಿಸಿಕೊಂಡ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರ (ಸೆ. 02): ಶಾಲೆಗೆ ರಜೆ ಹಾಕಲು ವಿದ್ಯಾರ್ಥಿಗಳು ಏನೇನೋ ಕಸರತ್ತು, ನಾಟಕಗಳನ್ನು ಮಾಡುತ್ತಾರೆ. ಆದರೆ ತನ್ನ ಸಾವಿಗೆ ರಜೆ ಕೊಡಬೇಕೆಂದು ವಿದ್ಯಾರ್ಥಿಗಳು ಕೋರಿದ್ದು ನೀವು ಕೇಳಿದ್ದೀರಾ? ಅದರೆ ವಿದ್ಯಾರ್ಥಿಯೊಬ್ಬ ತಾನು ಸತ್ತು ಹೋಗಿದ್ದು ಹಾಗಾಗಿ ರಜೆ ಕೊಡಬೇಕು ಎಂದು ಕೇಳಿ ಪ್ರಾಂಶುಪಾಲರಿಂದಲೇ ರಜೆ ಗಿಟ್ಟಿಸಿಕೊಂಡ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಇಲ್ಲಿನ ಜಿ.ಟಿ ರಸ್ತೆಯಲ್ಲಿರುವ ಖಾಸಗಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ತಾನು ಬೆಳಗ್ಗೆ 10 ಗಂಟೆಗೆ ಸತ್ತು ಹೋಗಿದ್ದರಿಂದ ಬೇಗ ಮನೆಗೆ ಹೋಗಬೇಕು. ಆದ್ದರಿಂದ ಅರ್ಧ ದಿನ ರಜೆ ನೀಡಬೇಕೆಂದು ಎಂದು ಕೋರಿ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿದ್ದ. ಪ್ರಾಂಶುಪಾಲರು ವಿದ್ಯಾರ್ಥಿಯ ಅರ್ಜಿಗೆ ಸಹಿ ಹಾಕಿ ರಜೆ ಮಂಜೂರು ಮಾಡಿದ್ದಾರೆ.

ಆ.20 ರಂದು ನಡೆದ ಈ ಘಟನೆ ವಿದ್ಯಾರ್ಥಿಗಳೆಡೆಯಲ್ಲಿ ಹರಿದಾಡಿದ್ದು ಶಾಲಾ ಆಡಳಿತ ಮಂಡಳಿಗೂ ತಲುಪಿದೆ. ಘಟನೆಯಿಂದ ಪ್ರತಿಷ್ಠಿತ ಶಾಲೆಗೆ ಇರಿಸುಮುರಿಸು ಉಂಟಾಗಿದ್ದು, ಪ್ರಾಂಶುಪಾಲರು ವಿಷಯವನ್ನು ಸರಿಯಾಗಿ ಗಮನಿಸದೇ ಸಹಿ ಮಾಡಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಶಿಕ್ಷಕರು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!