ಮೋದಿ ಪ್ರಾರ್ಥಿಸಿದ್ದ ಗುಹೆಗೆ ಭಾರೀ ಡಿಮ್ಯಾಂಡ್‌!

Published : Sep 02, 2019, 09:04 AM IST
ಮೋದಿ ಪ್ರಾರ್ಥಿಸಿದ್ದ ಗುಹೆಗೆ ಭಾರೀ ಡಿಮ್ಯಾಂಡ್‌!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಧ್ಯಾನ ಗೈದಿದ್ದ ಉತ್ತರಾಖಂಡದ ಕೇದಾರನಾಥದಲ್ಲಿನ ರುದ್ರ ಗುಹೆಗೆ ಭಾರೀ ಡಿಮ್ಯಾಂಡ್‌ ಬಂದಿದೆ. ಆ ಗುಹೆಯಲ್ಲಿ ಧ್ಯಾನಕ್ಕಾಗಿ ಜನರು ಮುಂಗಡ ಬುಕಿಂಗ್‌ ಮಾಡುತ್ತಿದ್ದಾರಂತೆ. ಪ್ರಧಾನಿ ಮೋದಿ ಧ್ಯಾನದ ಬಳಿಕ ಈವರೆಗೂ 78 ಬಾರಿ ಬುಕಿಂಗ್‌ ಕಂಡಿದೆ. ದಿನಕಳೆದಂತೆ ಇದು ಪ್ರವಾಸಿ ತಾಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ (ಸೆ. 02):  ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಧ್ಯಾನ ಗೈದಿದ್ದ ಉತ್ತರಾಖಂಡದ ಕೇದಾರನಾಥದಲ್ಲಿನ ರುದ್ರ ಗುಹೆಗೆ ಭಾರೀ ಡಿಮ್ಯಾಂಡ್‌ ಬಂದಿದೆ. ಆ ಗುಹೆಯಲ್ಲಿ ಧ್ಯಾನಕ್ಕಾಗಿ ಜನರು ಮುಂಗಡ ಬುಕಿಂಗ್‌ ಮಾಡುತ್ತಿದ್ದಾರಂತೆ. ಪ್ರಧಾನಿ ಮೋದಿ ಧ್ಯಾನದ ಬಳಿಕ ಈವರೆಗೂ 78 ಬಾರಿ ಬುಕಿಂಗ್‌ ಕಂಡಿದೆ. ದಿನಕಳೆದಂತೆ ಇದು ಪ್ರವಾಸಿ ತಾಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಮೋದಿ ಅವರ ಧ್ಯಾನದ ಬಳಿಕ 4 ಬಾರಿ, ಜೂನ್‌ನಲ್ಲಿ 28, ಜುಲೈನಲ್ಲಿ 10, ಆಗಸ್ಟ್‌ನಲ್ಲಿ 8, ಸೆಪ್ಟೆಂಬರ್‌ನಲ್ಲಿ 19, ಅಕ್ಟೋಬರ್‌ನಲ್ಲಿ 10 ಜನರು ಧ್ಯಾನಕ್ಕಾಗಿ ಮುಂಗಡ ಬುಕಿಂಗ್‌ ಮಾಡಿದ್ದಾರೆ. ಗುಹೆಯಲ್ಲಿ ಒಂದು ರಾತ್ರಿ ಕಳೆಯಲು 1500 ರು. ಭರಿಸಬೇಕು.

ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ 999 ರು. ಸಂದಾಯ ಮಾಡಬೇಕು. ಓರ್ವ ವ್ಯಕ್ತಿಗೆ ಮಾತ್ರ ಧ್ಯಾನಕ್ಕೆ ಅವಕಾಶವಿದೆ. ಗುಹೆಯಲ್ಲಿ ಮೊಬೈಲ್‌ ಕೂಡ ಬಳಸಬಹುದಾಗಿದೆ. ವಿದ್ಯುತ್‌, ನೀರು ಶೌಚಾಲಯ ಸೌಲಭ್ಯವೂ ಒದಗಿಸಲಾಗಿದೆ.

ಮುಂದಿನ ದಿನಗಳಲ್ಲಿ ಉತ್ತರಾಖಂಡದಲ್ಲಿ ಅತಿ ಹೆಚ್ಚು ಚಳಿ ಇರುತ್ತದೆ. 2020 ರ ಮೇ ತಿಂಗಳಿಂದ ಮತ್ತೆ ಸಾರ್ವಜನಿಕರಿಗೆ ಗುಹೆಯನ್ನು ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು
ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ