ಪ್ರಾಣಿಗಳಿಗೂ ತಟ್ಟಿದ ಬಿಸಿಲ ಬೇಗೆ : ನೀರಿಲ್ಲದೇ ಮಂಗಗಳ ಮಾರಣ ಹೋಮ

By Web DeskFirst Published Jun 8, 2019, 1:39 PM IST
Highlights

ದೇಶದಲ್ಲಿ ಈ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದೆ. ಮುಂಗಾರು ಪೂರ್ವದಲ್ಲಿ ಸುರಿಯಬೇಕಿದ್ದ ಮಳೆಯಲ್ಲಿ ಭಾರಿ ಕೊರತೆ ಕಂಡು ಬಂದಿದೆ. ನೀರಿನ ಸಮಸ್ಯೆ, ಬಿಸಿನ ಬೇಗೆ ಪ್ರಾಣಿಗಳಿಗೂ ತಟ್ಟಿದ್ದು ಕಾಡಿನಲ್ಲಿ ಮಂಗಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. 

ಭೋಪಾಲ್ : ದೇಶದಲ್ಲಿ ಮುಂಗಾರು ತಡವಾಗಿದ್ದು,ಬಿಸಿಲ ಬೇಗೆ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿದೆ. 

ಮಧ್ಯ ಪ್ರದೇಶದ ಜೋಶಿ ಬಾಬಾ ಕಾಡಿನಲ್ಲಿ  15 ಮಂಗಗಳು ನೀರಿಲ್ಲದೇ ಪ್ರಾಣ ಬಿಟ್ಟಿವೆ.  ಈ ಕಾಡಿನಲ್ಲಿಒಂದೇ ಪ್ರದೇಶದಲ್ಲಿ ನೀರಿದ್ದು, ಆದರೆ ಇನ್ನೊಂದು ಗುಂಪಿನ ಮಂಗಗಳು ಈ ಗುಂಪಿಗೆ ಕುಡಿಯಲು ಬಿಡದೇ ಇರುವುದೇ ಈ ದುರ್ಘಟನೆಗೆ ಕಾರಣವಾಗಿದೆ. 

ಇನ್ನುಕೆಲ ಮಂಗಗಳುಸೋಂಕಿನಿಂದಲೂ ಪ್ರಾಣಬಿಟ್ಟಿವೆ. ಈಗಾಗಲೇ ಸತ್ತ ಮಂಗಗಳ ದೇಹಗಳು ಕೊಳೆಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೃತ ಮಂಗಗಳ ದೇಹವನ್ನು ಸುಟ್ಟು ಹಾಕುವುದಾಗಿ ಅರಣ್ಯ ಇಲಾಖೆ ಅದಿಕಾರಿಗಳು ಹೆಳಿದ್ದಾರೆ. 

ಇನ್ನು ಇಲ್ಲಿ ಸತ್ತ ಮಂಮಗಳ ಮೃದೇಹವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೂ ಕಳುಹಿಸಲಾಗಿದ್ದು, ಎಲ್ಲಾ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

click me!