ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬರ ಅಧ್ಯಯನ ಕೈಗೊಂಡಿದ್ದು ಇದೀಗ ಕೊಪ್ಪಳ ಜಿಲ್ಲೆಯ ಹಿರೆಹಳ್ಳಕ್ಕೆ ಭೇಟಿ ನೀಡಿದ್ದಾರೆ.
ಕೊಪ್ಪಳ : ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಕೊಪ್ಪಳದ ಹಿರೇಹಳ್ಳಕ್ಕೆ ಭೇಟಿ ನೀಡಿದ್ದಾರೆ.
ಭಕ್ತರ ಸಹಾಯದಿಂದ ಗವಿ ಸಿದ್ದೇಶ್ವರ ಸ್ವಾಮೀಜಿ ಸ್ವಚ್ಛ ಮಾಡಿದ ಹಿರೇಹಳ್ಳ ಸ್ಥಳಕ್ಕೆ ತೆರಳಿ ಬಿ.ಎಸ್.ಯಡಿಯೂರಪ್ಪ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು ಗವಿಸಿದ್ದೇಶ್ವರ ಸ್ವಾಮೀಜಿ ಎಲ್ಲ ಸ್ವಾಮೀಜಿಗಳಿಗೆ ಮೇಲ್ಪಂಕ್ತಿ ಎನ್ನುವಂತೆ ಕೆಲಸ ಮಾಡಿದ್ದಾರೆ. ಹಿರೇಹಳ್ಳವನ್ನು ಈ ರೀತಿ ಅಭಿವೃದ್ಧಿ ಮಾಡಿರುವುದು ಅಭಿನಂದನಾರ್ಹ. ಇಂತಹ ಸ್ವಾಮೀಜಿ ಪಡೆದ ನಾವೆಲ್ಲರೂ ಕೂಡ ಧನ್ಯರು ಎಂದರು.
ಗವಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಇರುವ ಎಲ್ಲಾ ಮುನ್ನಾಲೋಚನೆ ಕೈಗೂಡಲಿದೆ. ಈ ಭಾಗದ ಜನತೆ ಸಾಥ್ ನೀಡುತ್ತಿರುವುದು ಅಭಿನಂದನಾರ್ಹ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಸಮನಾಂತರ ಜಲಾಶಯದ ನಿರ್ಮಾಣ ವಿಚಾರದ ಬಗ್ಗೆಯೂ ಮಾತನಾಡಿದ ಬಿಎಸ್ ವೈ ಈ ಸರ್ಕಾರ ಯಾವ ಕೆಲಸವನ್ನೂ ಮಾಡುವುದಿಲ್ಲ. ಈ ಸರ್ಕಾರಕ್ಕೆ ನೀರಾವರಿ ಯೋಜನೆ ಬಗ್ಗೆ ಕಾಳಜಿ ಇಲ್ಲ. ಮುಂದಿನ ದಿನದಲ್ಲಿ ಎಲ್ಲಾ ಯೋಜನೆ ಕೈಗೂಡಲಿವೆ ಎಂದರು.