
ಶ್ರೀನಗರ(ಸೆ.30): ಕಳೆದ ಎರಡು ವಾರಗಳಿಂದ ಪಾಕಿಸ್ತಾನ ಪಡೆಗಳು ದಾಳಿ ನಡೆಸುತ್ತಿರುವ ಜಮ್ಮು-ಕಾಶ್ಮೀರದ ಗಡಿಭಾಗದಲ್ಲೇ ಪಾಕಿಸ್ತಾನದಿಂದ ಉಗ್ರರ ರವಾನೆಗಾಗಿ ಕೊರೆಯಲಾಗುತ್ತಿದ್ದ 14 ಅಡಿ ಉದ್ದದ ಗೌಪ್ಯ ಸುರಂಗ ಮಾರ್ಗವನ್ನು ಆರ್ನಿಯಾ ಸೆಕ್ಟರ್'ನ ಗಡಿ ಭದ್ರತಾ ಪಡೆಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಭಾರತೀಯ ಗಡಿ ಭದ್ರತಾ ಸಿಬ್ಬಂದಿಯಿಂದ ಕಳೆದ 7 ತಿಂಗಳಲ್ಲಿ ಪತ್ತೆಯಾದ ಎರಡನೇ ಸುರಂಗ ಮಾರ್ಗ ಇದಾಗಿದೆ. ಈ ಹಿಂದೆ ಸಾಂಬಾದ ರಾಮ್'ಗಢದಲ್ಲಿಯೂ ಸುರಂಗ ಪತ್ತೆಯಾಗಿತ್ತು.
ಜಮ್ಮುವಿನಲ್ಲಿ ಹಬ್ಬದ ಸೀಸನ್'ನಲ್ಲಿ ಉಗ್ರ ದಾಳಿಯನ್ನು ಯೋಜಿಸಿ ಉಗ್ರರನ್ನು ಭಾರತದೊಳಕ್ಕೆ ರವಾನಿಸುವ ಉದ್ದೇಶದಿಂದಲೇ ಈ ಸುರಂಗ ಕೊರೆಯಲಾಗುತ್ತಿತ್ತು ಎನ್ನಲಾಗಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿರುವ ದಮಾನ ಬಳಿಯ ವಿಕ್ರಂ ಮತ್ತು ಪಟೇಲ್ ಪೋಸ್ಟ್'ಗಳಲ್ಲಿ ಸ್ವಚ್ಛತಾ ಕಾರ್ಯಾಚರಣೆ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.