
ಹೈದರಾಬಾದ್ (ಅ.08): ಜೈನ ಧರ್ಮದ ಆಚರಣೆ ಚೌಮಾಸ ಸಂದರ್ಭದಲ್ಲಿ 68 ದಿನಗಳ ಕಾಲ ಉಪವಾಸ ಮಾಡಿದ 13 ವರ್ಷದ ಬಾಲಕಿ ಹೈದರಾಬಾದ್ ನಲ್ಲಿ ಮೃತಪಟ್ಟಿದ್ದಾಳೆ.
8 ತರಗತಿಯಲ್ಲಿ ಓದುತ್ತಿರುವ ಆರಾಧನಾ ಮೃತಪಟ್ಟ ದುರ್ದೈವಿ. ಚೌಮಾಸ ಉಪವಾಸ ಮುಗಿದ ಎರಡು ದಿನಗಳ ಬಳಿಕ ಆರಾಧನಾ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಜೈನ ಧರ್ಮದ ಪ್ರಕಾರ ಚೌಮಾಸ ಆಚರಣೆಯು ದೊಡ್ಡವರು ಮಾಡುವಂತದ್ದು. ಆದರೂ ಆರಾಧನಾ ಕುಟುಂಬದವರು ಯಾಕೆ ಅವಳಿಂದ ಉಪವಾಸ ಮಾಡಿಸಿದರು ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.