ಮಾರುತಿ ಗಲಭೆ ಪ್ರಕರಣ : 13 ಮಂದಿಗೆ ಜೀವಾವಧಿ ಶಿಕ್ಷೆ

Published : Mar 19, 2017, 03:50 AM ISTUpdated : Apr 11, 2018, 12:56 PM IST
ಮಾರುತಿ ಗಲಭೆ ಪ್ರಕರಣ : 13 ಮಂದಿಗೆ ಜೀವಾವಧಿ ಶಿಕ್ಷೆ

ಸಾರಾಂಶ

ಅಪರಾಧಿಗಳು ಯಾವುದೇ ಯೋಜಿತವಿಲ್ಲದೆ ಆಕಸ್ಮಿಕವಾಗಿ ಈ ಅಪರಾಧ ಮಾಡಿದ್ದು, ಅದಲ್ಲದೆ ಇಲ್ಲಿಯವರೆಗೂ ಜೈಲುವಾಸ ಅನುಭವಿಸಿದ ಸಂದರ್ಭದಲ್ಲಿ ಉತ್ತಮ ನಡತೆ ಕಾಯ್ದುಕೊಂಡಿದ್ದು, ಈ ಹಿನ್ನೆಲೆಯಲ್ಲಿ 7 ವರ್ಷಗಳ ಕಾಲ ಶಿಕ್ಷೆ ವಿಧಿಸಬೇಕೆಂದು ಆರೋಪಿ ಪರ ವಕೀಲರು ಕೋರ್ಟ್'ಗೆ ತಿಳಿಸಿದ್ದಾರೆ.

ನವದೆಹಲಿ(ಮಾ.19): ಮಾರುತಿ ಕಾರು ತಯಾರಿಕಾ ಸಂಸ್ಥೆಯಲ್ಲಿ 2012ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳೆಂದು ಸಾಬೀತಾದ 13 ಮಂದಿ ಮಾಜಿ ನೌಕಕರಿಗೆ ಗುರಗಾಂವ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪರಾಧಿಗಳು ಯಾವುದೇ ಯೋಜಿತವಿಲ್ಲದೆ ಆಕಸ್ಮಿಕವಾಗಿ ಈ ಅಪರಾಧ ಮಾಡಿದ್ದು, ಅದಲ್ಲದೆ ಇಲ್ಲಿಯವರೆಗೂ ಜೈಲುವಾಸ ಅನುಭವಿಸಿದ ಸಂದರ್ಭದಲ್ಲಿ ಉತ್ತಮ ನಡತೆ ಕಾಯ್ದುಕೊಂಡಿದ್ದು, ಈ ಹಿನ್ನೆಲೆಯಲ್ಲಿ 7 ವರ್ಷಗಳ ಕಾಲ ಶಿಕ್ಷೆ ವಿಧಿಸಬೇಕೆಂದು ಆರೋಪಿ ಪರ ವಕೀಲರು ಕೋರ್ಟ್'ಗೆ ತಿಳಿಸಿದ್ದಾರೆ.

ಆದರೆ ಕೋರ್ಟ್ ಇವರ ವಾದವನ್ನು ಮಾನ್ಯ ಮಾಡಲಿಲ್ಲ. ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್'ಗೆ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. 2012ರ ಆಗಸ್ಟ್'ನಲ್ಲಿ ನಡೆದ ಗಲಭೆಯಲ್ಲಿ ಸಂಸ್ಥೆಯ ಹಿರಿಯ ಮಾನವ ಸಂಸ್ಥೆ ಅಧಿಕಾರಿ ಸೇರಿದಂತೆ ಕೆಲವರು ಕೊಲೆಯಾಗಿ ಹಲವು ಮಂದಿ ಗಾಯಗೊಂಡಿದ್ದರು. ಗುರಗಾಂವ್ ಕೋರ್ಟ್ ಮಾರ್ಚ್ 10 ರಂದು ತೀರ್ಪು ನೀಡಿ  ಪ್ರಕರಣದಲ್ಲಿ 117 ಮಂದಿಯನ್ನು ಖುಲಾಸೆಗೊಳಿಸಿ 31 ಮಂದಿ ಅಪರಾಧಿ ಎಂದು ಘೋಷಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!