
ಎಲೆಮರೆಕಾಯಿಗಳಂತೆ ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿದ ಪರಿಶ್ರಮಿ ಮಹಿಳೆ ಯರನ್ನು ಗುರುತಿಸಿ ಪುರಸ್ಕರಿಸುವ ಸಲುವಾಗಿ ಕನ್ನಡಪ್ರಭ-ಸುವರ್ಣ ನ್ಯೂಸ್ ಕೊಡಮಾ ಡುತ್ತಿರುವ ಪ್ರಶಸ್ತಿಗಳಿಗೆ ಸಾಧಕಿಯರ ಆಯ್ಕೆ ಶುಕ್ರವಾರ ನಡೆಯಿತು.
ಬೆಂಗಳೂರಿನ ಕನ್ನಡಪ್ರಭ-ಸುವರ್ಣ ನ್ಯೂಸ್ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಗೆ ತೀರ್ಪುಗಾರರಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯೆಯೂ ಆಗಿರುವ ಹಿರಿಯ ನಟಿ ಜಯ ಮಾಲಾ, ನಟಿಯರಾದ ಸುಧಾರಾಣಿ ಹಾಗೂ ಮಾಳವಿಕಾ ಅವಿನಾಶ್ ಸುಮಾರು 50 ಮಹಿಳೆ ಯರ ಸಾಧನೆಯನ್ನು ಅವಲೋಕಿಸಿ, ಪರಾಮರ್ಶಿಸಿ ಪುರಸ್ಕೃತರನ್ನು ಅಂತಿಮಗೊಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 29ರಂದು ಬೆಂಗಳೂರಿನಲ್ಲಿ ನಡೆಯಲಿದೆ.
10 ಕ್ಷೇತ್ರಗಳು: ಕೃಷಿ, ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ, ರಂಗ ಭೂಮಿ, ಕ್ರೀಡೆ, ವಿಶೇಷ ಚೇತನ ಸೇರಿ 10 ಕ್ಷೇತ್ರಗಳ 11 ಮಹಿಳಾ ಸಾಧಕರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ತೀರ್ಪುಗಾರರ ವಿಶೇಷ ಪ್ರಶಸ್ತಿಗೂ ಸಾಧಕ ನಾರಿಯೊಬ್ಬರನ್ನು ಆರಿಸಲಾಯಿತು. ಪ್ರತಿಯೊಂದು ಕ್ಷೇತ್ರಕ್ಕೂ ಭಾರೀ ಸಂಖ್ಯೆಯ ಪ್ರವೇಶಗಳು ಬಂದಿದ್ದವು. ಇವುಗಳನ್ನು ವಿಂಗಡಿಸಿ, ಆ ಪೈಕಿ ಅತ್ಯುತ್ತಮ ಎಂದು ಕಂಡು ಬಂದ ಆಯ್ದ 50 ಮಹಿಳೆಯರ ವಿವರಗಳನ್ನು ಅಂತಿಮ ಆಯ್ಕೆಗಾಗಿ ತೀರ್ಪುಗಾರರ ಮುಂದಿಡಲಾಗಿತ್ತು.
ಅಷ್ಟೂವಿವರಗಳನ್ನು ಗಹನವಾಗಿ ಅವಲೋಕಿಸಿ, ಗಂಭೀರವಾಗಿ ಚರ್ಚಿಸಿ ಪ್ರಶಸ್ತಿಗೆ ಸಾಧಕರನ್ನು ಅಂತಿಮಗೊಳಿಸಲಾಯಿತು. ವಿಶೇಷ ಚೇತನ ವಿಭಾಗದಲ್ಲಂತೂ ಆಯ್ಕೆ ಕಠಿಣವಾಗಿತ್ತು. ಸುದೀ ರ್ಘ ಸಮಾಲೋಚನೆ ಬಳಿಕ ಒಬ್ಬರನ್ನು ಆರಿಸ ಲಾಗದೆ ಆ ವಿಭಾಗದಲ್ಲಿ ಜಂಟಿ ವಿಜೇತರನ್ನು ಆರಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.