
ಬೆಳಗಾವಿ(ಏ.22): ಜಿಲ್ಲೆಯ ಅಥಣಿ ತಾಲೂಕಿನ ಝಂಜರುವಾಡ ಗ್ರಾಮದ ಬಳಿ 5 ವರ್ಷದ ಬಾಲಕಿಯೊಬ್ಬಳು 200 ಅಡಿ ಕೊರೆದಿರುವ ಕೊಳವೆ ಬಾವಿಗೆ ಬಿದ್ದಿದ್ದು 30 ಅಡಿ ಆಳಕ್ಕೆ ಸಿಲುಕಿರುವ ಸಾಧ್ಯತೆಯಿದೆ.
ಅಜಿತ್ ಮಾದರ ಎಂಬುವವರ ಪುತ್ರಿ ಕಾವೇರಿ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿರುವ ಬಾಲಕಿ.ಐಗಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ.ರೈತ ಶಂಕರ್ ಹಿಪ್ಪರಗಿ ಎಂಬುವರಿಗೆ ಸೇರಿದ ಕೊಳವೆ ಬಾವಿ ಇದಾಗಿದೆ. ಬೆಳಗಾವಿ ಎಸ್'ಪಿ ರವಿಕಾಂತೇ'ಗೌಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪೊಲೀಸ್ ಹಾಗೂ ವೈದ್ಯಕೀಯ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.
ಬಾಲಕಿಗೆ ಉಸಿರಾಡಲು ಅನುವಾಗುವಂತೆ ಕೊಳವೆ ಬಾಯಿಯಲ್ಲಿ ಪೈಪ್'ಗಳ ಮೂಲಕ ಆಮ್ಲಜನಕ ಅಳವಡಿಸಲಾಗಿದೆ. ಜಮೀನು ಮಾಲೀಕರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.