ಮುಜಾಫರ್'ನಗರವೊಂದರಲ್ಲೇ ಲಕ್ಷಕ್ಕೂ ಅಧಿಕ ಮಂದಿ ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆ...!

Published : Dec 24, 2016, 10:42 AM ISTUpdated : Apr 11, 2018, 12:48 PM IST
ಮುಜಾಫರ್'ನಗರವೊಂದರಲ್ಲೇ ಲಕ್ಷಕ್ಕೂ ಅಧಿಕ ಮಂದಿ ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆ...!

ಸಾರಾಂಶ

ಒಟ್ಟು 19,12,228 ಮತದಾರರನ್ನೊಳಗೊಂಡ ಈ ಜಿಲ್ಲೆಯಲ್ಲಿ 10,47026 ಪುರುಷರು, 8,72,039 ಮಂದಿ ಮಹಿಳೆಯರು ಸೇರಿದಂತೆ 163 ತೃತಿಯ ಲಿಂಗಿಗಳು ಈ ಬಾರಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಮುಜಾಫರ್'ನಗರ(ಡಿ.24): ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಮುಜಾಫರನಗರವೊಂದರಲ್ಲೇ 1,12,746 ಮಂದಿ ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಮುಜಾಫರ್'ನಗರ ಜಿಲ್ಲೆಯೊಂದರಲ್ಲಿ ಬುಧಾನ, ಪುರ್ಖಾಜಿ,ಕಥೋಲಿ, ಮುಜಾಫರ್'ನಗರ್, ಚಾರ್ಥ್'ವಾಲ್ ಹಾಗೂ ಮೀರ್'ಪುರ್ ಎಂಬ ಆರು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ. ಒಟ್ಟು 19,12,228 ಮತದಾರರನ್ನೊಳಗೊಂಡ ಈ ಜಿಲ್ಲೆಯಲ್ಲಿ 10,47026 ಪುರುಷರು, 8,72,039 ಮಂದಿ ಮಹಿಳೆಯರು ಸೇರಿದಂತೆ 163 ತೃತಿಯ ಲಿಂಗಿಗಳು ಈ ಬಾರಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಿ.ಕೆ. ಸಿಂಗ್ ಮುಜಾಫರನಗರವೊಂದರಲ್ಲೇ 1614 ಪೋಲಿಂಗ್ ಬೂತ್'ಗಳನ್ನು ತೆರೆಯಲಾಗುವುದು, ಹಾಗೆಯೇ ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆಯನ್ನೂ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌