ಆಂಧ್ರ - ಕರ್ನಾಟಕ ಗಡಿಯಲ್ಲಿ ಆನೆ ವಾರ್

Published : Dec 24, 2016, 10:26 AM ISTUpdated : Apr 11, 2018, 12:46 PM IST
ಆಂಧ್ರ - ಕರ್ನಾಟಕ ಗಡಿಯಲ್ಲಿ ಆನೆ ವಾರ್

ಸಾರಾಂಶ

ಇದು ನೋಡಿದರೆ ನಮಗೆ ಭಾರತ ,ಪಾಕಿಸ್ತಾನ್ ಗಡಿಯಲ್ಲಿನ ಯೋಧರು ಗಡಿ ರಕ್ಷಣೆನ ವಾರ್'ನಂತೆ ಇಲ್ಲಿ ಕಾಣುತ್ತದೆ. ಎರಡು ರಾಜ್ಯಗಳ ಗಡಿಯನ್ನು ಹೊಂದಿರುವ ರಾಜ್ ಪೇಟ್,ರಾಮಕುಪ್ಪಂನ ಗಡಿಯಲ್ಲಿ ಹಗಳಿರುಳು ಎನ್ನದೆ ತಮ್ಮ ರಾಜ್ಯದ ಕಡೆ ಕಾಡಾನೆಗಳ ಹಿಂಡು ಬರಬಾರದು ಎಂದು ರಾತ್ರಿ ಎನ್ನದೆ ಪಟಾಕಿ ಸಿಡಿಸಿ ,ಡೈರ್ ಗಳಿಗೆ ಬೆಂಕಿ ಹಾಕಿ ರಾತ್ರಿ ಇಡಿ ಕಣ್ಗಾವಲಾಗಿ ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಕೋಲಾರ (ಡಿ.24): ಕಳೆದ ಮೂರು ನಾಲ್ಕು ದಿನಗಳಲ್ಲಿಂದ ಕರ್ನಾಟಕ ಹಾಗೂ ಆಂಧ್ರ ಅಧಿಕಾರಿಗಳಿಂದ ಗಡಿಯಲ್ಲಿ ಆನೆ ವಾರ್ ನಡೆಯುತ್ತಿದೆ.

ಇದು ನೋಡಿದರೆ ನಮಗೆ ಭಾರತ ,ಪಾಕಿಸ್ತಾನ್ ಗಡಿಯಲ್ಲಿನ ಯೋಧರು ಗಡಿ ರಕ್ಷಣೆನ ವಾರ್'ನಂತೆ ಇಲ್ಲಿ ಕಾಣುತ್ತದೆ. ಎರಡು ರಾಜ್ಯಗಳ ಗಡಿಯನ್ನು ಹೊಂದಿರುವ ರಾಜ್ ಪೇಟ್,ರಾಮಕುಪ್ಪಂನ ಗಡಿಯಲ್ಲಿ ಹಗಳಿರುಳು ಎನ್ನದೆ ತಮ್ಮ ರಾಜ್ಯದ ಕಡೆ ಕಾಡಾನೆಗಳ ಹಿಂಡು ಬರಬಾರದು ಎಂದು ರಾತ್ರಿ ಎನ್ನದೆ ಪಟಾಕಿ ಸಿಡಿಸಿ ,ಡೈರ್ ಗಳಿಗೆ ಬೆಂಕಿ ಹಾಕಿ ರಾತ್ರಿ ಇಡಿ ಕಣ್ಗಾವಲಾಗಿ ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಕೂಗಳತೆಯಲ್ಲಿ  ಆಂಧ್ರಪ್ರದೇಶದ ಕೌಡಿನ್ಯ ಅರಣ್ಯ ಪ್ರದೇಶದತ್ತ ಕಾಡಾನೆಗಳು ಬಾರದಂತೆ ,ರಾತ್ರಿ ವೇಳೆ ಕಣ್ಗಾವಲಾಗಿ ಗಡಿ ಕಾಯುತ್ತಿರುವ ಆಂಧ್ರ ಅಧಿಕಾರಿಗಳು ,ಗ್ರಾಮಸ್ಥರು, ಇತ್ತ ನಮ್ಮ ರಾಜ್ಯ ಅರಣ್ಯ ಹಿರಿಯ ಅಧಿಕಾರಿಗಳು ಮನವೂಲಿಕೆ ವಿಫಲವಾಗಿ, ಎರಡು ಗಡಿಗಳಲ್ಲಿ ನಿಲ್ಲದ ಪಟಾಕಿ ಸಿಡಿತ,ಬೆಂಕಿ ಹುರಿಗೆ ಕಾಡಾನೆಗಳು ಕಂಗಾಲಾಗಿವೆ.ಯಾವ ಕಡೆ ಹೋಗಬೇಕು ಎಂಬ ದಿಕ್ಕೂ ತೊಚದೆ ಕೋಲಾರ ಜಿಲ್ಲೆಯ ಗಡಿಯಲ್ಲಿ ಬೀಡು ಬಿಟ್ಟಿವೆ!

ಕುಪ್ಪಂ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ವಿಧಾನಸಭಾ ಕ್ಷೇತ್ರವಾಗಿದೆ. ಹಾಗಾಗಿ ಈ ಭಾಗದಲ್ಲಿ ಕಾಡಾನೆಗಳು ಬಾರದಂತೆ ಏಚ್ಚರ ವಹಿಸಲಾಗಿದೆ. ಹಿರಿಯ ಅಧಿಕಾರಿಗಳ ಹಾಗೂ ಸಿಎಂ ಸೂಚನೆಯಂತೆ ಹಗಳಿರುಳು ಎನ್ನದೆ ಗಡಿಯಲ್ಲಿಯೇ ಪಟಾಕಿ ಸಿಡಿಸಿ,ಬೆಂಕಿ ಹಾಕಿ ಕೊಂಡು ಆಂಧ್ರ ಅರಣ್ಯ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು ,ಸ್ಥಳೀಯ ಗ್ರಾಮಸ್ಥರು ಎಲ್ಲರು ಸೇರಿಕೊಂಡು ಕಾಡಾನೆಗಳು ಬಾರದಂತೆ ಕಾಯುತ್ತಿದ್ದಾರೆ.

ಕಾಡಾನೆಗಳು ಕರ್ನಾಟಕ ಕಡೆಯಿಂದ ಬಂದಿವೆ ಹಾಗೆ ಹೋಗಲಿ ನಮ್ಮ ರಾಜ್ಯದ ಕಡೆ ಬರಬಾರದು,ಇಲ್ಲಿ ಆಪಾರ ಪ್ರಮಾಣದ ನಷ್ಟವಾಗುತ್ತದೆ. ಗಡಿಯಲ್ಲಿ ತಡೆ ಮಾಡಿದರೆ ಕರ್ನಾಟಕ ಅರಣ್ಯ ಅಧಿಕಾರಿಗಳು ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮ ಕಾಡಾನೆ ಓಡಿಸುವುದು ಯಾವ ನ್ಯಾಯ ? ಎಂದು ಪ್ರಶ್ನಿಸುತ್ತಾರೆ ಆಂಧ್ರ ರೈತರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ