ಛತ್ತೀಸ್'ಘಡದಲ್ಲಿ ನಕ್ಸಲ್ ದಾಳಿ: 24 ಸಿಆರ್'ಪಿಎಫ್ ಯೋಧರು ಹುತಾತ್ಮ

By Suvarna web DeskFirst Published Apr 24, 2017, 6:44 AM IST
Highlights

11 ಮಂದಿ ಮೃತಪಟ್ಟು ಹಾಗೂ 7 ಜನ ಗಾಯಗೊಂಡಿದ್ದಾರೆ. ಮಾವೋ ಗಲಭೆ ಪೀಡಿತ ಪ್ರದೇಶದಲ್ಲಿ ಸಿಆರ್'ಪಿ'ಎಫ್ 74ನೇ ಬೆಟಾಲಿಯನ್ ರಸ್ತೆ ನಿರ್ಮಾಣ ಕಾಮಗಾರಿ ಕಾವಲಿದ್ದ ಸಮಯದಲ್ಲಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ' ಎಂದು ಸುಕ್ಮಾ ಹೆಚ್ಚುವರಿ ಎಸ್'ಪಿ ಜಿತೇಂದ್ರ ಶುಕ್ಲಾ' ತಿಳಿಸಿದ್ದಾರೆ.

ಸುಕ್ಮಾ(ಏ.24): ಛತ್ತೀಸ್'ಘಡ'ದ ಸುಕ್ಮಾ ಜಿಲ್ಲೆಯಲ್ಲಿ ನಕ್ಸ'ಲರು ನಡೆಸಿದ ದಾಳಿಯಲ್ಲಿ 24 ಮಂದಿ ಸಿ'ಆರ್'ಪಿ'ಎಫ್ ಯೋಧರು ಹುತಾತ್ಮರಾಗಿದ್ದಾರೆ. ಈ ವರ್ಷದಲ್ಲಿ ನಡೆದ ಭೀಕರ ನಕ್ಸ'ಲ್ ದಾಳಿ ಇದಾಗಿದೆ.

24 ಮಂದಿ ಮೃತಪಟ್ಟು ಹಾಗೂ 7 ಜನ ಗಾಯಗೊಂಡಿದ್ದಾರೆ. ಮಾವೋ ಗಲಭೆ ಪೀಡಿತ ಪ್ರದೇಶದಲ್ಲಿ ಸಿಆರ್'ಪಿ'ಎಫ್ 74ನೇ ಬೆಟಾಲಿಯನ್ ರಸ್ತೆ ನಿರ್ಮಾಣ ಕಾಮಗಾರಿ ಕಾವಲಿದ್ದ ಸಮಯದಲ್ಲಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ' ಎಂದು ಸುಕ್ಮಾ ಹೆಚ್ಚುವರಿ ಎಸ್'ಪಿ ಜಿತೇಂದ್ರ ಶುಕ್ಲಾ' ತಿಳಿಸಿದ್ದಾರೆ.   

ಗಾಯಗೊಂಡ ಜವಾನರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ದಾಳಿಯ ನಂತರ ನಕ್ಸಲರು ಯೋಧರ ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ.

ಘಟನೆಯ ನಂತರ ಛತ್ತೀಸ್'ಘಡ ಮುಖ್ಯಮಂತ್ರಿ ರಮಣ್ ಸಿಂಗ್ ಉನ್ನತ ಅಧಿಕಾರಿಗಳ ತುರ್ತು ಸಭೆ ಕರೆದಿದ್ದು, ಕೇಂದ್ರಕ್ಕೆ ಮಾಹಿತಿ ಕೂಡ ನೀಡಿದ್ದಾರೆ.

click me!