
ಡಲ್ಲಾಸ್(ಆ.31) ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಕ್ಕ ಸಮ್ಮೇಳನಕ್ಕೆ ಈ ಬಾರಿ ಹೊಸ ಧ್ಯೇಯ ವಾಕ್ಯವನ್ನು ಕೂಡ ರೂಪಿಸಲಾಗಿದ್ದು, "ಅಕ್ಕರೆಯ ಹತ್ತರ ಸಾರ್ಥಕ ಹೊತ್ತು" ಎಂಬ ಘೋಷ ವಾಕ್ಯದಡಿ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ.
ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್ ನಗರದಲ್ಲಿ ಈ ಬಾರಿ 10ನೇ ವಿಶ್ವ ಅಕ್ಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿಯಾಗಿ ಆರಂಭವಾಗಿದೆ.
ಇಂದಿನಿಂದ 3 ದಿನ ಅಕ್ಕ ಸಮ್ಮೇಳನ, ಅಮೆರಿಕದಲ್ಲಿ ಕನ್ನಡದ ಮನ
ಡಲ್ಲಾಸ್ ನಗರದ ಶೆರಟನ್ ಕನ್ವೆನ್ ಷನ್ ಸೆಂಟರ್ ನಲ್ಲಿ ಕನ್ನಡದ ಮನಗಳು ಒಂದಾಗಿವೆ. ಅಕ್ಕ ಸಮ್ಮೇಳನಕ್ಕೆ ಸ್ವಾಗತ ಕೋರಲು ರಚಿಸಿರುವ ಗೀತೆ ಕೂಡ ಅಷ್ಟೆ ಮನ ತಣಿಸುವಂತೆ ಇದೆ. ವಿಶ್ವೇಶ ಭಟ್ ಅವರ ಗಾಯನ ಸಾರಥ್ಯದಲ್ಲಿ ಮೂಡಿ ಬಂದಿರುವ ಗೀತೆಯನ್ನು ಒಮ್ಮೆ ಕೇಳಲೇಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ