
ಮುಂಬೈ: ಇಲ್ಲಿನ ಪರೇಲ್ ಪ್ರದೇಶದಲ್ಲಿರುವ ಹಿಂದ್ ಕ್ರಿಸ್ಟಲ್ ಟವರ್ ಎಂಬ ವಸತಿ ಸಂಕೀರ್ಣ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ಬುಧವಾರ ಬೆಳಗ್ಗೆ 9 ರ ವೇಳೆಗೆ17 ಅಂತಸ್ತಿನ ಕಟ್ಟಡದ 12ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಬೆಂಕಿಯ ಕೆನ್ನಾಲಿಗೆಯಿಂದ ಸೃಷ್ಟಿಯಾದ ಹೊಗೆಯು ಕಟ್ಟಡದ ಮೆಟ್ಟಿಲುಗಳು ಹಾಗೂ ಹೊರ ಹೋಗುವ ಸ್ಥಳಗಳಲ್ಲೆಲ್ಲಾ ಹಬ್ಬಿಕೊಂಡಿತ್ತು.
ಇದೇ ವೇಳೆ ಇದೇ ಕಟ್ಟದಲ್ಲಿ ವಾಸವಿದ್ದ 10 ವರ್ಷದ ಬಾಲಕಿ ಜೆನ್ ಸದಾವಾರ್ತೆ ದಿಟ್ಟತನ ಮೆರೆದಿದ್ದಾರೆ. ಇದೇ ಕಟ್ಟಡದ 18ನೇ ಫ್ಲೋರ್ ನಲ್ಲಿ ಈಕೆಯ ಕುಟುಂಬ ವಾಸವಿತ್ತು.
ಬೆಂಕಿ ಬೀಳುತ್ತಿದ್ದಂತೆ ಆಕೆ ಅಕ್ಕಪಕ್ಕದವರನ್ನು ಈ ಕಟ್ಟಡದ ನಿವಾಸಿಗಳನ್ನು ಎಚ್ಚರಿಸಿದ್ದಾಳೆ. ಅಲ್ಲದೇ 16 ಜನರನ್ನು ಅಪಾಯದಿಂದ ಪಾರು ಮಾಡಿದ್ದಾಳೆ.
ಅಲ್ಲದೇ ಆತಂಕಗೊಳ್ಳದಂತೆ ಧೈರ್ಯದ ಮಾತುಗಳನ್ನಾಡಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದು ಇದೀಗ ಎಲ್ಲರಿಂದ ಆಕೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.